ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಕೆಂಡಾಮಂಡಲರಾದ ರೈತರು | ಪ್ರತಿ ರಾಜ್ಯದ ಟೋಲ್ ಕೇಂದ್ರಗಳನ್ನು ವಶಪಡಿಸಿಕೊಳ್ಳಲು ನಿರ್ಧರಿಸಿದ ರೈತರು
ನವದೆಹಲಿ: ಕೇಂದ್ರ ಸರ್ಕಾರವು ಕರಾಳ ಕೃಷಿ ಕಾನೂನನ್ನು ತಿದ್ದುಪಡಿ ಮಾಡಿ ರೈತರನ್ನು ಓಲೈಸಲು ಪ್ರಯತ್ನಿಸಿದ್ದು, ಆದರೆ, ಕೇಂದ್ರ ಸರ್ಕಾರದ ಈ ಪ್ರಯತ್ನ ವಿಫಲವಾಗಿದೆ. ಇದೀಗ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿ ಕಳುಹಿಸಿದ ಕರಡನ್ನು ಕಂಡು ರೈತರು ಕೆಂಡವಾಗಿದ್ದು, ಮತ್ತೊಂದು ಸುತ್ತಿನ ಭಾರೀ ಪ್ರತಿಭಟನೆ ಸಜ್ಜಾಗಿದ್ದಾರೆ.
ಡಿಸೆಂಬರ್ 14ರಂದು ದೇಶಾದ್ಯಂತ ಭಾರೀ ಪ್ರತಿಭಟನೆ ನಡೆಯಲಿದ್ದು, ರೈತರ ಆಕ್ರೋಶಕ್ಕೆ ಪ್ರತಿ ರಾಜ್ಯಗಳಲ್ಲಿರುವ ಟೋಲ್ ಗೇಟ್ ಗಳನ್ನು ಗುರಿಯಾಗಲಿವೆ. ಈಗಾಗಲೇ ಟೋಲ್ ಗೇಟ್ ಗಳ ಮೇಲೆ ದೃಷ್ಟಿ ನೆಟ್ಟಿರುವ ರೈತ ಮುಖಂಡರು, ಟೋಲ್ ಗೇಟ್ ಗಳನ್ನು ವಶಕ್ಕೆ ಪಡೆದುಕೊಳ್ಳುವ ಮೂಲಕ ಕೇಂದ್ರ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ ಎಂದು ಆಂಗ್ಲ ಅಂತರ್ಜಾಲ ಮಾಧ್ಯಮಗಳು ವರದಿ ಮಾಡಿವೆ.
ಸಿಂಘುಗಡಿಯಲ್ಲಿ ಈ ಬಗ್ಗೆ ರೈತ ಮುಖಂಡರ ಸಭೆ ನಡೆದ ಬಳಿಕ ಈ ಮಾಹಿತಿ ಹೊರ ಬಿದ್ದಿದೆ. ಕೇಂದ್ರದ ನೀಡಿರುವ ತಿದ್ದುಪಡಿ ಕರಡು, ಹಳೆಯ ಪ್ರಸ್ತಾಪಕ್ಕೆ ಹೊಸ ಉಡುಗೆ ತೊಡಿಸಿದಂತೆ ಇದೆ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಟೀಕಿಸಿದೆ.
ಈ ಮೂರು ನೂತನ ಕೃಷಿ ಮಸೂದೆಗಳನ್ನೂ ರದ್ದುಪಡಿಸಬೇಕು ಎಂದು ಆಗ್ರಹಿಸುತ್ತೇವೆ. ನಮ್ಮ ಪ್ರತಿಭಟನೆ ಮುಂದುವರಿಸಬೇಕು. ಮುಂದೆ ಪ್ರತಿ ರಾಜ್ಯದಲ್ಲಿಯೂ ಪ್ರತಿಭಟನೆ ಜೋರಾಗಲಿದೆ. ಮುಂದಿನ ಹಂತದ ಹೋರಾಟದಲ್ಲಿ ರೈತರು ಟೋಲ್ ಕೇಂದ್ರಗಳನ್ನು ಗುರಿಯಾಗಿಸಿ ಪ್ರತಿಭಟನೆ ಮುಂದುವರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
























