2:54 AM Friday 11 - September 2026

ಕೇರಳದಲ್ಲಿ ಕಾಂಗ್ರೆಸ್ ಅಧ್ಯಕ್ಷ ಸುಧಾಕರನ್ ಅರೆಸ್ಟ್: ‘ಕೈ’ ನಾಯಕ ಬಂಧನಕ್ಕೊಳಗಾದ ಕೇಸ್ ಯಾವುದು..?

23/06/2023

ನಕಲಿ ಪುರಾತನ ವಸ್ತು ವಂಚನೆ ಪ್ರಕರಣದಲ್ಲಿ ಕೇರಳ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಇ.ಸುಧಾಕರನ್ ಬಂಧನಕ್ಕೊಳಗಾದರು. ಆದರೆ ಕೆಲವೇ ಹೊತ್ತಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.

ಕಳಮಶ್ಶೇರಿಯಲ್ಲಿರುವ ಅಪರಾಧ ವಿಭಾಗದ ಕಚೇರಿಯಲ್ಲಿ ಏಳೂವರೆ ಗಂಟೆಗಳ ವಿಚಾರಣೆಯ ನಂತರ ಸುಧಾಕರನ್ ಅವರನ್ನು ಇಂದು ಬಂಧಿಸಲಾಗಿತ್ತು. ಅತ್ತ ಸುಧಾಕರನ್ ಬಂಧನದ ವಿರುದ್ಧ ವ್ಯಾಪಕ ಪ್ರತಿಭಟನೆ ಕೇರಳದಲ್ಲಿ ನಡೆಯಿತು.

ಯಾತಕ್ಕೆ ಬಂಧನ..? ಏನಿದು ಕೇಸ್..?:

ಗಲ್ಫ್‌ ರಾಜಮನೆತನದ್ದು ಎಂದು ಹೇಳುವ ವಿಶೇಷ ಪುರಾತನ ವಸ್ತುಗಳ ಮಾರಾಟದಿಂದ ಸಿಕ್ಕಿದ 2.62 ಲಕ್ಷ ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ ಎಂದು ಆರೋಪಿತ ಮೊನ್ಸನ್ ನಮ್ಮಲ್ಲಿ ಹೇಳಿದ್ದರು ಎಂದು ದೂರುದಾರರು ಹೇಳಿದ್ದಾರೆ.

ಬ್ಯಾಂಕ್‌ ನಲ್ಲಿರುವ ಈ ಮೊತ್ತವನ್ನು ಹಿಂಪಡೆಯಲು ಇರುವ ಅಡೆತಡೆಗಳನ್ನು ನಿವಾರಿಸಲು ಮೊನ್ಸನ್ ಹಲವಾರು ಬಾರಿ 10 ಕೋಟಿ ರೂಪಾಯಿ ಪಡೆದಿದ್ದಾರೆ. 2018 ನವೆಂಬರ್ 22ರಂದು ಕೊಚ್ಚಿಯ ಕಾಲೂರಿನಲ್ಲಿರುವ ಮೊನ್ಸನ್ ಮನೆಯಲ್ಲಿ ಸುಧಾಕರನ್ ಭೇಟಿಯಾಗಿದ್ದರು. ದೆಹಲಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂಬ ಆಧಾರದ ಮೇಲೆ ತಾನು ಮೊನ್ಸನ್‌ಗೆ ಹಣ ನೀಡಿದ್ದೆ ಎಂದು ದೂರುದಾರರು ಹೇಳಿದ್ದಾರೆ.

ಮೊನ್ಸನ್ ಮೊದಲ ಆರೋಪಿಯಾಗಿರುವ ಪ್ರಕರಣದಲ್ಲಿ ಸುಧಾಕರನ್ ಎರಡನೇ ಆರೋಪಿಯಾಗಿದ್ದಾರೆ. 50,000 ಮತ್ತು ಅಷ್ಟೇ ಮೊತ್ತದ ಇಬ್ಬರ ಶ್ಯೂರಿಟಿ ನೀಡಿ ಈ ಪ್ರಕರಣದಲ್ಲಿ ಜಾಮೀನು ನೀಡುವಂತೆ ಹೈಕೋರ್ಟ್ ಆದೇಶಿಸಿತ್ತು.

ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಸುಧಾಕರನ್ ಹೈಕೋರ್ಟ್‌ನಲ್ಲಿ ಅಫಿಡವಿಟ್ ಕೂಡ ನೀಡಿದ್ದರು. ಡಿವೈಎಸ್ಪಿ ವೈ.ಆರ್.ರುಸ್ತಂ ಪ್ರಸ್ತುತ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ. ಮೂರನೇ ಆರೋಪಿ, ಐಜಿ ಜಿ.ಲಕ್ಷ್ಮಣ್ ಅವರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದರೂ ಅವರ ವಿಚಾರಣೆ ಯಾವಾಗ ಎಂಬುದರ ಬಗ್ಗೆ ಕ್ರೈ ಬ್ರಾಂಚ್ ಮಾಹಿತಿ ನೀಡಿಲ್ಲ ಎಂದು ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler
Exit mobile version