11:06 AM Thursday 16 - October 2025

ಕೆನಡಾದಲ್ಲಿ ಖಲಿಸ್ತಾನಿಗಳಿಂದ ಹಿಂದೂಗಳಿಗೆ ಬಹಿರಂಗ ಬೆದರಿಕೆ: ದೇವಾಲಯಗಳ ವಿರೂಪಕ್ಕೆ ಯತ್ನ ಆರೋಪ

25/09/2023

ಕೆನಡಾದಲ್ಲಿ ಹೆಚ್ಚುತ್ತಿರುವ ತನ್ಮ ಪ್ರಭಾವದಿಂದ ಮತ್ತಷ್ಟು ಪ್ರಚೋದನೆಗೊಂಡ ಖಲಿಸ್ತಾನಿ ಪರ ಉಗ್ರಗಾಮಿಗಳು (ಪಿಕೆಇ) ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳನ್ನು ಬಹಿರಂಗವಾಗಿ ಬೆದರಿಸಲು ಪ್ರಾರಂಭಿಸಿದ್ದಾರೆ. ಅಲ್ಲದೇ ದೇವಾಲಯಗಳನ್ನು ವಿರೂಪಗೊಳಿಸುವ ಆರೋಪ ಕೇಳಿಬಂದಿದೆ.

ಕೆನಡಾದಲ್ಲಿನ ಭಾರತೀಯ ರಾಯಭಾರ ಕಚೇರಿ ಮತ್ತು ರಾಜತಾಂತ್ರಿಕರ ಭದ್ರತೆಗೆ ಖಲಿಸ್ತಾನಿಗಳ ಬಹಿರಂಗ ಬೆದರಿಕೆಗಳು ಕೆಟ್ಟ ಬೆಳವಣಿಗೆಯಾಗಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆನಡಾದಲ್ಲಿ ಕುಳಿತಿರುವ ಪಿಕೆಇಗಳಿಂದ ಬೆದರಿಕೆ, ಹಿಂಸಾಚಾರ, ಮಾದಕವಸ್ತು ಕಳ್ಳಸಾಗಣೆ ಮತ್ತು ಸುಲಿಗೆಯ ಬಗ್ಗೆ ಸಂಪೂರ್ಣ ಮೌನವಿದೆ. ಇದು ಎರಡೂ ದೇಶಗಳ ಮೇಲೆ ಪರಿಣಾಮ ಬೀರುತ್ತದೆ” ಎಂದು ಅಧಿಕಾರಿಯೊಬ್ಬರು ಹೇಳಿದರು.

ಈ ಎಲ್ಲಾ ವಿಷಯಗಳ ಬಗ್ಗೆ ಇಂದು ಗುಪ್ತಚರ ಸಂಸ್ಥೆಗಳ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಗಿದೆ.
ಪಿಕೆಇಗಳ ತೋಳ್ಬಲ ಮತ್ತು ಹಣದ ಶಕ್ತಿಯಿಂದ ಕೆನಡಾದ ಎಲ್ಲಾ ಗುರುದ್ವಾರಗಳಿಂದ ಭಾರತ ಪರ ಸಿಖ್ಖರನ್ನು ಹೊರಹಾಕುವುದಕ್ಕೆ ಖಲಿಸ್ತಾನಿಗಳು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿ

Exit mobile version