ಹಣಕ್ಕಾಗಿ ಚಿಕ್ಕಪ್ಪನಿಂದಲೇ ಬಾಲಕಿಯ ಬರ್ಬರ ಹತ್ಯೆ!

ಉತ್ತರ ಪ್ರದೇಶ: ಹಣಕ್ಕಾಗಿ ಚಿಕ್ಕಪ್ಪನೇ ಬಾಲಕಿಯನ್ನು ಅಪಹರಿಸಿ ಹತ್ಯೆ ಮಾಡಿರುವ ಅಮಾನವೀಯ ಘಟನೆಯೊಂದು ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಮಂಗಳವಾರ ಸಂಜೆ ಫರೈರಾ ಗ್ರಾಮದ ಬಾಲಕಿಯ ಮನೆಯಿಂದ ಆಕೆಯನ್ನು ಅಪಹರಿಸಲಾಗಿತ್ತು. 6 ಲಕ್ಷ ರೂಪಾಯಿ ನೀಡಿದರೆ ಬಾಲಕಿಯನ್ನು ಬಿಡುಗಡೆಗೊಳಿಸುವುದಾಗಿ ಹೇಳಿದ್ದರು. ಆದರೆ ಅಷ್ಟೊಂದು ಮೊತ್ತದ ಹಣವನ್ನು ನೀಡಲೂ ಸಾಧ್ಯವಾಗದ ಕಾರಣ ಬಾಲಕಿಯ ತಂದೆ ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ಶೋಧ ನಡೆಸುವಷ್ಟರಲ್ಲಿ ಬಾಲಕಿಯನ್ನು ಅಪಹರಿಸಿದ್ದ ಚಿಕ್ಕಪ್ಪ ಅಮಿತ್ ಮತ್ತು ತಂಡ, ಹತ್ಯೆ ನಡೆಸಿ, ಫರೈರಾ ಗ್ರಾಮದ ಹೊರವಲಯದ ಸಾಸಿವೆ ತೋಟದಲ್ಲಿ ಎಸೆದು ಪರಾರಿಯಾಗಿದ್ದರು.
ಈ ಪ್ರಕರಣದ ತನಿಖೆ ನಡೆಸಿದ ವೇಳೆ ಬಾಲಕಿಯ ತಂದೆ ಹಾಗೂ ಚಿಕ್ಕಪ್ಪ ಅಮಿತ್ ಗೆ ಆಸ್ತಿಯ ವಿಚಾರವಾಗಿ ವಿವಾದವಿರುವುದು ಬೆಳಕಿಗೆ ಬಂದಿತ್ತು. ಈ ವಿಚಾರವನ್ನು ಕೆದಕಿದ ಪೊಲೀಸರು ಬಾಲಕಿಯ ಚಿಕ್ಕಪ್ಪನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ.
ಅಮಿತ್ ಗೆ ಈ ಕೃತ್ಯ ಎಸಗಲು ಆತನ ಸ್ನೇಹಿತ ಪಕ್ಕದ ಹಳ್ಳಿಯ ನಿವಾಸಿ ನಿಖಿಲ್ ಸಹಾಯ ಮಾಡಿದ್ದಾನೆ ಎಂದು ಡಿಸಿಪಿ ಅತುಲ್ ಶರ್ಮಾ ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth