ಕೊಟ್ಟಿಗೆಹಾರ: ವರಮಹಾಲಕ್ಷ್ಮಿ ಹಬ್ಬ ಆಚರಣೆ

kottigehara
09/08/2025

ಕೊಟ್ಟಿಗೆಹಾರ: ಪಟ್ಟಣ ಸೇರಿದಂತೆ ಕೊಟ್ಟಿಗೆಹಾರ, ಬಣಕಲ್, ಬಾಳೂರು ಸುತ್ತಮುತ್ತ ವರಮಹಾಲಕ್ಷ್ಮಿ ಹಬ್ಬವನ್ನು ಗೃಹಿಣಿಯರು ಸಂಭ್ರಮದಿಂದ ಆಚರಿಸಿದರು.

ಮಹಿಳೆಯರು ಮುಂಜಾನೆಯೇ ಎದ್ದು ಸ್ನಾನ  ಮಡಿಯಾಗಿ ಉಪವಾಸ ವೃತ ಆಚರಿಸುತ್ತಾರೆ. ಮನೆಯಲ್ಲಿ ಕಲಶ ಸ್ಥಾಪಿಸಿ ದೇವಿಗೆ ಸೀರೆ ಉಡಿಸಿ  ಆಭರಣಗಳಿಂದ ಅಲಂಕರಿಸುತ್ತಾರೆ. ದೇವಿಯ ಮುಂದೆ ಹಣವನ್ನು ಇಟ್ಟು ಪೂಜಿಸುತ್ತಾರೆ.

ಈ ಹಬ್ಬವು ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ, ಧನ, ದಾನ್ಯ ಸಂಪತ್ತು  ಹೆಚ್ಚಾಗಲೆಂದು ಮನೆಯ ಮಹಿಳೆಯರು ಪ್ರಾರ್ಥಿಸಿದರು. ಹೆಣ್ಣು ಮಕ್ಕಳಿಗೆ, ಮುತ್ತೈದೆಯರಿಗೆ ಅರಿಶಿಣ, ಕುಂಕುಮ, ಬಳೆ ನೀಡುವ ಪದ್ದತಿಯೂ ಆಚರಣೆಯಲ್ಲಿದೆ.

ಕೊಟ್ಟಿಗೆಹಾರದ ಶ್ರೀಸೀತಾರಾಮ ದೇವಸ್ಥಾನದಲ್ಲಿ ಮಹಿಳೆಯರು ಸೇರಿ ಸಾಮೂಹಿಕವಾಗಿ ವರಮಹಾಲಕ್ಷ್ಮಿ ಹಬ್ಬ ಆಚರಿಸಿದರು. ಅತ್ತಿಗೆರೆಯಲ್ಲಿ ಗೃಹಿಣಿಯರಾದ ಸಾವಿತ್ರಿ, ಜ್ಯೋತಿ ಹಾಗೂ ಮತ್ತಿತರರು ಸೇರಿ ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬ ಆಚರಿಸಿದರು. ವಿವಿಧ ತಿಂಡಿ ತಿನಿಸುಗಳನ್ನು ಮಾಡಿ ಹಂಚಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version