2:41 PM Wednesday 20 - August 2025

ಕೆಸವಳಲು ಕೂಡಿಗೆ: ಕಣ್ ದೃಷ್ಟಿ ತೆಗೆಯುವ ವಿಶೇಷ ನಂಬಿಕೆ

kudige
17/10/2022

ಮೂಡಿಗೆರೆ: ತಾಲ್ಲೂಕಿನ ಜೊಗಣಕೆರೆ ಗ್ರಾಮದ ಕೆಸವಳಲು ಕೂಡಿಗೆಗೆ ದಕ್ಷಿಣ ಕರ್ನಾಟಕದ ಹೆಚ್ಚಿನ ಜನ ಬರುತ್ತಾರೆ. ಇದು ಕೆಸವಳಲು ಮತ್ತು ಅಬಚೂರು- ಹಾಲೂರು ಮಧ್ಯ ಭಾಗದಲ್ಲಿ ಸೇರುವ ಹೇಮಾವತಿ ಮತ್ತು ಜಪವಾತಿ ನದಿ ಸೇರುವ ಸ್ಥಳಕ್ಕೆ ಕೂಡಿಗೆ ಅನ್ನುತ್ತಾರೆ . ಇಲ್ಲಿ ರಾಮ ದೇವಸ್ಥಾನ ಇದೇ ಹಾಗೆ ನದಿಗಳು ಸೇರುವ ಜಾಗದಲ್ಲಿ ಆಸ್ರಕೊಂಡ ಇದೆ.  ಅದೇ ರೀತಿ ಅನಾದಿಕಾಲದಿಂದಲೂ  ಕಣ್ಣು ದೃಷ್ಟಿ ತೆಗೆಯುವ  ಸಂಪ್ರದಾಯವಿದೆ.

ಪ್ರತಿ ವರ್ಷದಲ್ಲಿ ಒಂದೆರಡು ಬಾರಿ ಇಲ್ಲಿಗೆ ಸರ್ವಧರ್ಮೀಯರೂ ಆಗಮಿಸುತ್ತಾರೆ. ತಮ್ಮ ಹೊಸ ವಾಹನಗಳಿಗೆ ವಿಶೇಷವಾಗಿ ದೃಷ್ಟಿ ಪೂಜೆ , ನವ ಜೋಡಿಗಳಿಗೆ  ಬಾಸಿಂಗ ಪೂಜೆ, ಮನೆಯ ಹಾಗೂ ತೋಟದ ಮಣ್ಣು ತಂದು ದೃಷ್ಟಿ ಪೂಜೆ ಮಾಡುತ್ತಾರೆ. ಗದ್ದೆ ಹಸಿರು ಫಲ ಕಟಾವು ಮಾಡುವ ಮೊದಲು ಪೂಜೆ ಮಾಡಿಸಿದರೆ ಉತ್ತಮ ಎಂದು ಜನರು ನಂಬಿದ್ದಾರೆ.

ಸಾವಿರಾರು ಜನರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಸೂಕ್ತವಾದ ಮೂಲಭೂತ ಸೌಕರ್ಯಗಳು ಇಲ್ಲವಾಗಿದೆ.  ಶೌಚಾಲಯ ವ್ಯವಸ್ಥೆ ಇಲ್ಲ , ಕ್ಯಾಂಟಿನ್, ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version