11:04 PM Tuesday 14 - October 2025

ಲಂಚ ಸ್ವೀಕರಿಸುತ್ತಿದ್ದ ವೇಳೆ ಪಿಡಿಓ ಬಂಧನ

pdo
21/01/2022

ಹುಣಸೂರು: ನರೇಗಾ ಯೋಜನೆಯಡಿ ಕೊಟ್ಟಿಗೆ ಬಿಲ್ ಮಾಡಿಕೊಡಲು 5 ಸಾವಿರ ರೂ. ಲಂಚ ಕೇಳಿದ್ದ ಪಿಡಿಓನ್ನು ಲಂಚಪಡೆಯುತ್ತಿರುವ ಬಂಧಿಸಿರುವ ಘಟನೆ ತಾಲೂಕಿನ ತಟ್ಟೆಕೆರೆ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.

ಹುಣಸೂರು ತಾಲೂಕಿನ ತಟ್ಟೆಕೆರೆ ಪಿಡಿಓ ಸತೀಶ್‌ಕುಮಾರ್ ಬಂಧಿತ ಆರೋಪಿ. ನರೇಗಾ ಯೋಜನೆಯಡಿ ನಿಲುವಾಗಿಲು ಗ್ರಾಮದ ಸುರೇಶ್ ಎಂಬುವವರು ಸಾವಿರ ರೂ. ವೆಚ್ಚದ ದನದ ಕೊಟ್ಟಿಗೆ ನಿರ್ಮಿಸಿಕೊಳ್ಳಲು ಈಗ್ಗೆ 5-6 ತಿಂಗಳ ಹಿಂದೆ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದ್ದರು, ಇತ್ತೀಚೆಗೆ ಸರಕಾರದಿಂದ ಅನುದಾನ ಬಿಡುಗಡೆಯಾಗಿತ್ತು. ಜ.18ರಂದು ಗ್ರಾ.ಪಂ.ನಲ್ಲಿ ಪಿಡಿಓರನ್ನು ಭೇಟಿಯಾದ ಪರ‍್ಯಾದುದಾರರು ಕೊಟ್ಟಿಗೆ ಬಿಲ್ ಮಾಡಿಕೊಡುವಂತೆ ಮಾಡಿದ ಮನವಿಗೆ 5 ಸಾವಿರ ರೂ ಲಂಚ ಕೇಳಿದ್ದರು. ಈ ಸಂಬಂಧ ಮೈಸೂರಿನ ಭ್ರಷ್ಟಾಚಾರ ನಿಗ್ರಹದಳಕ್ಕೆ ಪರ‍್ಯಾದುದಾರ ನಿಲುವಾಗಿಲಿನ ಸುರೇಶ್ ದೂರು ನೀಡಿದ್ದರು.

ಎ.ಸಿ.ಬಿ.ಡಿವೈ.ಎಸ್.ಪಿ.ಧರ್ಮೇಂದ್ರ ಮಾರ್ಗದರ್ಶನದಲ್ಲಿ ಗುರುವಾರ ಎಸಿಬಿ ಅಧಿಕಾರಿಗಳ ತಂಡವು ಪಿಡಿಓ ಸತೀಶ್‌ಕುಮಾರ್ 5 ಸಾವಿರ ರೂ ಲಂಚ ಪಡೆಯುತ್ತಿರುವ ವೇಳೆ ಕಾರ್ಯಾಚರಣೆ ನಡೆಸಿ, ಹಣ ಸಮೇತ ಪಿಡಿಓನನ್ನು ವಶಕ್ಕೆ ಪಡೆದಿದ್ದಾರೆ. ಗ್ರಾ.ಪಂ.ನಲ್ಲಿ ತಡ ರಾತ್ರಿವರೆಗೂ ಎ.ಸಿ.ಬಿ. ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

2022ರ ಆಸ್ಕರ್ ಪ್ರಶಸ್ತಿಗೆ ತಮಿಳು ಚಿತ್ರ ‘ಜೈ ಭೀಮ್’ ಆಯ್ಕೆ

ಗಂಡನ ರುಂಡ ಕತ್ತರಿಸಿ ಪೊಲೀಸ್​ ಠಾಣೆಗೆ ತೆಗೆದುಕೊಂಡು ಹೋದ ಪತ್ನಿ

ದ್ವಿಚಕ್ರ ವಾಹನ – ಲಾರಿ ಮುಖಾಮುಖಿ ಡಿಕ್ಕಿ; ಸವಾರ ಸಾವು

ಹೆಸರಾಂತ ಮಕ್ಕಳ ತಜ್ಞ ಡಾ.ದಿನೇಶ್ ಅವರ ಸ್ಮರಣಾರ್ಥ ಚಾಲ್ಸ್ ಆಂಬುನೆಲ್ಸ್ ನಿಂದ ಉಚಿತ ಸೇವೆ

ಹೆಸರಾಂತ ಮಕ್ಕಳ ತಜ್ಞ ಡಾ.ದಿನೇಶ್ ಅವರ ಸ್ಮರಣಾರ್ಥ ಚಾಲ್ಸ್ ಆಂಬುನೆಲ್ಸ್ ನಿಂದ ಉಚಿತ ಸೇವೆ

 

ಇತ್ತೀಚಿನ ಸುದ್ದಿ

Exit mobile version