ಉಡುಪಿ: ತಡರಾತ್ರಿ ಡಿ.ಜೆ.ಸೌಂಡ್ ಹಾಕಿ ನೃತ್ಯ: ಪೊಲೀಸ್ ದಾಳಿ

ಉಡುಪಿ: ತಡರಾತ್ರಿವರೆಗೂ ಅತೀ ಕರ್ಕಶವಾದ ಡಿ.ಜೆ. ಸೌಂಡ್ ಹಾಕಿ ನೃತ್ಯ ಮಾಡುತ್ತಿದ್ದ ಮನೆಗೆ ಪೊಲೀಸರು ದಾಳಿ ನಡೆಸಿ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಪುತ್ತೂರು ಗ್ರಾಮದ ಕೊಡಂಕೂರು ಎಂಬಲ್ಲಿ ಮಾ.23ರಂದು ನಡೆದಿದೆ.
ಕೊಡಂಕೂರು ಪುತ್ರನ್ ಗ್ಯಾಸ್ ಗೋಡಾನ್ ಬಳಿ ರವಿರಾಜ್(50) ಎಂಬವರ ಮನೆಯ ಅಂಗಳದಲ್ಲಿ ಶಾಮಿಯಾನ ಹಾಕಿ, ಯಾವುದೇ ಪರವಾನಿಗೆ ಅಥವಾ ಪೂರ್ವಾನುಮತಿ ಇಲ್ಲದೆ ಅತೀ ಕರ್ಕಶವಾದ ಡಿ.ಜೆ.ಸೌಂಡ್ಸ್ ಹಾಕಿ ಕೊಂಡು ನೃತ್ಯ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿದ್ದಾರೆ.
ಮುಂದಿನ ಕಾನೂನು ಕ್ರಮಕ್ಕಾಗಿ ಮನೆಯಲ್ಲಿದ್ದ ಸೌಂಡ್ಸ್ ಮಿಕ್ಸರ್ ಹಾಗೂ 2 ಸೌಂಡ್ ಬಾಕ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw