12:05 AM Thursday 21 - August 2025

ನಿನ್ನೆ ರಣರಂಗವಾಗಿದ್ದ ಕೆಂಪುಕೋಟೆಯಲ್ಲಿ ಇಂದು ಕಂಡು ಬಂದ ದೃಶ್ಯ!

27/01/2021

ದೆಹಲಿ: ನಿನ್ನೆ ದೆಹಲಿಯ ಕೆಂಪುಕೋಟೆ ಬಳಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಮಾಧ್ಯಮಗಳು ಹೇಳಿದಂತೆಯೇ ಇದೊಂದು ಹೈಡ್ರಾಮಾ ಎನ್ನುವುದು ಇದೀಗ ಸ್ಪಷ್ಟವಾಗುತ್ತಿದೆ. ಬಿಜೆಪಿ ಕಾರ್ಯಕರ್ತ ದೀಪ್ ಸಿಧು ನೇತೃತ್ವದಲ್ಲಿ ಕೆಂಪುಕೋಟೆಯ ಮೇಲೆ ಹತ್ತಿ ರೈತರ ಬಾವುಟ ಹಾರಿಸಲಾಗಿದೆ ಎನ್ನುವುದು ಇದೀಗ ರೈತ ಮುಖಂಡರ ಆರೋಪವೂ ಆಗಿದೆ.

ನಿನ್ನೆ ರಣರಂಗವಾಗಿದ್ದ ಕೆಂಪು ಕೋಟೆಯ ಬಳಿಯಲ್ಲಿ ಇಂದು ದೆಹಲಿ ಪೊಲೀಸರು ಹಾಗೂ ಉನ್ನತ ಭದ್ರತಾ ಸಿಬ್ಬಂದಿ ಸರ್ಪಗಾವಲು ಹಾಕಿದ್ದಾರೆ. ಕೆಂಪು ಕೋಟೆ ಬಳಿಯಲ್ಲಿ ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ಇದ್ದರು ಕೂಡ, ಹೇಗೆ ರೈತರು ಒಳಗೆ ಹೋದರು ಎನ್ನುವುದು ನಿನ್ನೆಯವರೆಗೆ ಪ್ರಶ್ನಾರ್ಹವಾಗಿತ್ತು. ಆದರೆ, ಬಹುತೇಕ ಮಾಧ್ಯಮಗಳು  ನಿನ್ನೆ ವರದಿ ಮಾಡಿರುವ ಪ್ರಕಾರವೇ ಇದೊಂದು ಹೈಡ್ರಾಮಾ ಆಗಿತ್ತು. ಬಿಜೆಪಿ ಕಾರ್ಯಕರ್ತನೋರ್ವನ ನೇತೃತ್ವದಲ್ಲಿಯೇ ಕೆಂಪು ಕೋಟೆಯ ಮೇಲೆ ಹತ್ತಿ ರೈತರ ಧ್ವಜವನ್ನು ಹಾರಿಸಲಾಗಿದೆ.

ರೈತರ ಪ್ರತಿಭಟನೆಯ ದಿಕ್ಕು ತಪ್ಪಿಸಲು ಬಿಜೆಪಿಗೆ ಇದಕ್ಕಿಂತ ಬೇರೆ ಯಾವುದೇ ದಾರಿ ಇರಲಿಲ್ಲ ಎನ್ನುವ ಚರ್ಚೆಗಳು ಇದರ ಬೆನ್ನಿಗೆ ಕೇಳಿ ಬಂದಿದೆ. ನಿನ್ನೆಯ ಜಿದ್ದಾಜಿದ್ದಿ ಹೈಡ್ರಾಮವೋ, ಹೋರಾಟವೋ ನಡೆದ ಬಳಿಕದ ಸ್ಥಿತಿಯ ದೆಹಲಿಯ ಕೆಂಪು ಕೋಟೆಯ ಬಳಿಯ ಕೆಲವು ಫೋಟೋಗಳು ದೊರೆತಿವೆ.

ಇತ್ತೀಚಿನ ಸುದ್ದಿ

Exit mobile version