12:51 AM Thursday 21 - August 2025

ಪಾಠ ಮಾಡಬೇಕಾದ ಉಪನ್ಯಾಸಕ ವಿದ್ಯಾರ್ಥಿನಿಯನ್ನು ಮಂಚಕ್ಕೆ ಕರೆದ!: ಆಡಿಯೋ ವೈರಲ್

audio viral
07/06/2023

ಕಲಬುರಗಿ: ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾದ ಉಪನ್ಯಾಸಕನೋರ್ವ ವಿದ್ಯಾರ್ಥಿನಿಗೆ ಕರೆ ಮಾಡಿ ಮಂಚಕ್ಕೆ ಕರೆದಿರುವ ಆಡಿಯೋವೊಂದು ವೈರಲ್ ಆಗಿದ್ದು, ಘಟನೆ ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಗುಲ್ಬರ್ಗಾ ವಿಶ್ವವಿದ್ಯಾಲಯದದ ಅತಿಥಿ ಉಪನ್ಯಾಸಕನದ್ದೆನ್ನಲಾದ ಆಡಿಯೋವೊಂದು ವೈರಲ್ ಆಗಿದ್ದು,  ವಿದ್ಯಾರ್ಥಿನಿ ಜೊತೆಗೆ ಒಟ್ಟು 23 ನಿಮಿಷಗಳ ಕಾಲ ಮಾತನಾಡಿರುವ ಉಪನ್ಯಾಸಕನ ಆಡಿಯೋವು ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ವಿವಾದಕ್ಕೆ ಕಾರಣವಾಗಿದೆ.

23 ನಿಮಿಷದ ಆಡಿಯೋದಲ್ಲಿ ಸಾಕಷ್ಟು ವಿಷಯಗಳನ್ನು ಮಾತನಾಡಿರುವ ಉಪನ್ಯಾಸಕ, ನೀನು ನನಗೆ ಗರ್ಲ್ ಫ್ರೆಂಡ್ ಆಗಿರು ಎಂದು ಪೀಡಿಸಿದ್ದಾನೆ. ಆದರೆ ಆತನ ಮಾತಿಗೆ ವಿದ್ಯಾರ್ಥಿನಿ ಒಪ್ಪಿಕೊಂಡಿಲ್ಲ.

ಘಟನೆಯ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಆದರೆ ಈ ಆಡಿಯೋ ವೈರಲ್ ಆಗಿದ್ದು, ಗುಲ್ಬರ್ಗಾ ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ ಭಾರೀ ಸಂಚಲನ ಮೂಡಿಸಿದೆ. ಜೊತೆಗೆ ಈ ಆಡಿಯೋ ಹೇಗೆ ಲೀಕ್ ಆಯ್ತು ಅನ್ನೋ ಪ್ರಶ್ನೆಗಳು ಕೂಡ ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version