ಸಂವಿಧಾನ ಸಮರ್ಪಕವಾಗಿ ಜಾರಿಯಾಗಲಿ: ಉದಯ್ ಕುಮಾರ್ ತಲ್ಲೂರ್

bheema gharjane
27/11/2023

ಹೆಬ್ರಿ : ನಮ್ಮ ದೇಶದ ಸಂವಿಧಾನ ಸರ್ವರಿಗೂ ಸಮರ್ಪಕವಾಗಿ ಜಾರಿಯಾಗಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಭೀಮಘರ್ಜನೆ ಸಂಸ್ಥಾಪಕ ಉದಯ್ ಕುಮಾರ್ ತಲ್ಲೂರ್ ಒತ್ತಾಯಿಸಿದ್ದಾರೆ.

ನಾಲ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಿಯಾರುಬೆಟ್ಟು ಶಾಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಭೀಮಘರ್ಜನೆ ಜಿಲ್ಲಾ ಸಮಿತಿ ಉಡುಪಿ ಇವರ ಆಶ್ರಯದಲ್ಲಿ  ಭಾರತ ದೇಶದ ಪಾರ್ಲಿಮೆಂಟ್ ಗೆ ಸಂವಿಧಾನವನ್ನು ಮಂಡಿಸಿದ ದಿನವನ್ನು ಮೂಲ ನಿವಾಸಿಗಳ ವಿಜಯೋತ್ಸವವನ್ನಾಗಿ ನ.26ರಂದು ಆಚರಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತಾಡಿದರು.

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನ್ಯಾಯ ಸಮ್ಮತವಾದ ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಅತಿ ದೊಡ್ಡ ಲಿಖಿತ ಸಂವಿಧಾನವನ್ನು ರಚಿಸಿ ಈ ದೇಶಕ್ಕೆ ಅರ್ಪಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಗೌತಮ್ ಕುಂದಾಪುರ ಸಂವಿಧಾನ ಪೀಠಿಕೆಯನ್ನು ಭೋದಿಸಿದರು. ಕಾರ್ಯಕ್ರಮವನ್ನು ನೇತಾಜಿ ಯುವ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಪ್ರಸಾದ್ ಹೆಗ್ಡೆ ಉದ್ಘಾಟಿಸಿ ಮಾತನಾಡಿದರು. ಇದೇ ವೇಳೆ ಅತಿಥಿಗಳನ್ನ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಭೀಮ ಘರ್ಜನೆಯ ತತ್ವ ಸಿದ್ದಾಂತವನ್ನು ಒಪ್ಪಿ ಸುಧಾಕರ್ ಸೂರ್ಗೋಳಿ ಅವರ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಕಾರ್ಯಕರ್ತರು ಸಂಘಟನೆಗೆ ಸೇರ್ಪಡೆಗೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಭೀಮಘರ್ಜನೆ ಜಿಲ್ಲಾ‌ ಸಂಚಾಲಕರಾದ ಚಂದ್ರ ಅಲ್ತಾರ್ ವಹಿಸಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ವಿಠಲ ಸಾಲಿಕೇರಿ, ಪ್ರಶಾಂತ್ ಉಡುಪಿ, ಸುಂದರ್ ನೀರೆ, ಅಣ್ಣಪ್ಪ ಪಾಡಿಗರ, ತಾಲೂಕು ಸಂಘಟನಾ ಸಂಚಾಲಕರಾದ ಮಂಜುನಾಥ ಗುಡ್ಡೆಯಂಗಡಿ, ರಾಜು ಪಾದೆಮಠ, ಕೃಷ್ಣ ಅಲ್ತಾರ್, ಸುರೇಂದ್ರ ಬಜಗೋಳಿ, ಅಣ್ಣಪ್ಪ ಆವರ್ಸೆ, ಶಶಿ ಬಳ್ಕೂರ್, ಶೇಖರ ಆರ್ಡಿ, ರಾಘವೇಂದ್ರ ಬೇಳಂಜೆ ಸುನೀತಾ ಅಂಡಾರು, ಶಾರದಾ ಪಾದೆಮಠ, ಕಾವೇರಿ ಪಾದೆಮಠ ಉಪಸ್ಥಿತರಿದ್ದರು. ಸುದೀಕ್ಷಾ ಹೊರ್ಲಾಳಿ  ಸ್ವಾಗತಿಸಿ, ಸತೀಶ್ ಸೂರ್ಗೋಳಿ ನಿರೂಪಿಸಿದರು.

ಇತ್ತೀಚಿನ ಸುದ್ದಿ

Exit mobile version