ಬಿಜೆಪಿ 3ನೇ ಪಟ್ಟಿಯಲ್ಲಿ ಲಿಂಬಾವಳಿ, ರಾಮದಾಸ್ ಗೆ ಕೈ ತಪ್ಪಿದ ಟಿಕೆಟ್!: ಶಿವಮೊಗ್ಗ ನಗರಕ್ಕೆ ಟಿಕೆಟ್ ಘೋಷಿಸದ ಬಿಜೆಪಿ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆ ಬಿಜೆಪಿ ತನ್ನ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೂರನೇ ಪಟ್ಟಿಯಲ್ಲಿ 10 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
ಈ ಬಾರಿ ಅರವಿಂದ್ ಲಿಂಬಾವಳಿ ಬದಳಿಗೆ ಅವರ ಪತ್ನಿ ಮಂಜುಳ ಅರವಿಂದ್ ಲಿಂಬಾವಳಿ ಅವರಿಗೆ ಮಹದೇವಪುರದಿಂದ ಟಿಕೆಟ್ ನೀಡಲಾಗಿದೆ. ಇನ್ನು ಕೃಷ್ಣರಾಜ ಕ್ಷೇತ್ರದಿಂದ ರಾಮದಾಸ್ ಗೆ ಟಿಕೆಟ್ ಕೈತಪ್ಪಿದ್ದ ಶ್ರೀವತ್ಸ ಎಂಬುವರಿಗೆ ಟಿಕೆಟ್ ನೀಡಲಾಗಿದೆ.
ಇನ್ನು ಜಗದೀಶ್ ಶೆಟ್ಟರ್ ಪಕ್ಷ ಬಿಡಲು ಕಾರಣವಾದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಅನ್ನು ಮಹೇಶ್ ತೆಂಗಿನಕಾಯಿಗೆ ನೀಡಲಾಗಿದೆ. ಹೆಬ್ಬಾಳದಿಂದ ಕಟ್ಟಾ ಜಗದೀಶ್, ನಗ್ತಾನ್ ನಿಂದ ಸಂಜೀವ್ ಐಹೊಳೆ, ಸೆಡಂನಿಂದ ರಾಜಕುಮಾರ್ ಪಾಟೀಲ್, ಕೊಪ್ಪಳದಿಂದ ಮಂಜುಳಾ ಅಂಬರೀಶ್, ರೋಣಾದಿಂದ ಕಳಕಪ್ಪ ಬಂಡಿ, ಹಗರಿ ಬೊಮ್ಮನಹಳ್ಳಿಯಿಂದ ಬಿ. ರಾಮಣ್ಣ, ಗೋವಿಂದರಾಜನಗರದಿಂದ ಉಮೇಶ್ ಶೆಟ್ಟಿ ಹೆಸರು ಘೋಷಣೆಯಾಗಿದೆ. ಒಟ್ಟಾರೆ 224 ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳ ಟಿಕೆಟ್ ಘೋಷಣೆಯಾಗಿದ್ದು ಇನ್ನು ಶಿವಮೊಗ್ಗ ನಗರ ಮತ್ತು ಮಾನ್ವಿ ಕ್ಷೇತ್ರದ ಟಿಕೆಟ್ ಘೋಷಣೆ ಬಾಕಿ ಇದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw