ದಲಿತರಿಗೆ ಪ್ರವೇಶವಿಲ್ಲ ಎಂದ ದೇವಸ್ಥಾನಕ್ಕೆ ಬೀಗ ಜಡಿದ ಎಂ.ಕೆ.ಸ್ಟಾಲಿನ್ ಸರ್ಕಾರ

sri dharmaraja draupadi amman temple
08/06/2023

ಚೆನ್ನೈ: ದಲಿತರ ಪ್ರವೇಶಕ್ಕೆ ನಿರಾಕರಿಸಿದ ದೇವಸ್ಥಾನಕ್ಕೆ ತಮಿಳುನಾಡಿನಲ್ಲಿ ಬೀಗ ಹಾಕಲಾಗಿದ್ದು, ಮೇಲ್ಜಾತಿಗಳ ಜಾತಿ ಮದದ ವಿರುದ್ಧ ಎಂ.ಕೆ.ಸ್ಟಾಲಿನ್ ಸರ್ಕಾರ ಖಡಕ್ ಕ್ರಮಕೈಗೊಂಡಿದೆ.

ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮೇಲ್ಪತಿ ಗ್ರಾಮದ ಶ್ರೀಧರ್ಮರಾಜ ದ್ರೌಪದಿ ಅಮ್ಮನ್ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ವಣ್ಣಿಯಾರ್ ಸಮುದಾಯವು ಇಲ್ಲಿ ಪ್ರಾಬಲ್ಯ ಹೊಂದಿದೆ. ಈ ದೇವಸ್ಥಾನಕ್ಕೆ ದಲಿತರು ಬರಬಾರದು, ಬೇಕಾದರೆ ಹೊರಗೆ ನಿಂತು ಪೂಜೆ ಸಲ್ಲಿಸಲು ನಮ್ಮದೇನೂ ಅಭ್ಯಂತರವಿಲ್ಲ ಎಂದಿದೆ.

ಏಪ್ರಿಲ್ ನಲ್ಲಿ ನಡೆದ ಹಬ್ಬದ ಸಂದರ್ಭದಲ್ಲಿ ದಲಿತರ ಪೂಜೆ ಸಲ್ಲಿಸಲು ಹೋದಾಗ ವಣ್ಣಿಯಾರ್ ಸಮುದಾಯದ ಮುಖಂಡರು ಅಡ್ಡಿಪಡಿಸಿದ್ದರು.ಈ ವೇಳೆ ದಲಿತರ ಮನವಿಯ ಮೇರೆ ಜಿಲ್ಲಾಡಳಿತವು ಹಲವು ಬಾರಿ ಸಭೆ ನಡೆಸಿದ್ರೂ ಯಾವುದೇ ಪ್ರಯೋಜವಾಗಿರಲಿಲ್ಲ.

ಈ ದೇಗುಲವು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವ್ಯಾಪ್ತಿಗೆ ಸೇರಿದ್ದಾದರೂ ವಣ್ಣಿಯಾರ್ ಸಮುದಾಯದವರು ತಮ್ಮದೇ ಕಾನೂನು ನಡೆಸಲು ಮತ್ತು ಅಸ್ಪೃಶ್ಯತೆ ಆಚರಣೆಗೆ ಮುಂದಾದ್ದರು. ಎರಡೂ ಸಮುದಾಯಕ್ಕೂ ಸೌಹಾರ್ದಯುತವಾಗಿ ಪೂಜೆ ನಡೆಸಲು ಅವಕಾಶ ಕಲ್ಪಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇದೀಗ ದೇವಸ್ಥಾನಕ್ಕೆ ಬೀಗ ಜಡಿಯಲಾಗಿದೆ.

ವಿಲ್ಲುಪುರಂ ಕಂದಾಯ ವಿಭಾಗದ ಅಧಿಕಾರಿ ಎಸ್.ರವೀಂದ್ರನ್ ನೇತೃತ್ವದಲ್ಲಿ ಅಸಮಾನತೆ ಆಗರವಾಗಿದ್ದ ದೇವಸ್ಥಾನಕ್ಕೆ ಕೊನೆಗೂ ಬೀಗ ಜಡಿಯಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version