ಅಸ್ಸಾಂನಲ್ಲಿ ಮತದಾನ ಪ್ರಮಾಣ ಶೇ.64ಕ್ಕೆ ಇಳಿಕೆ: ಅಲ್ಲಲ್ಲಿ ಮತದಾನ ಬಹಿಷ್ಕಾರ

ಗಲಾಟೆ, ಘಟನೆಗಳು ಮತ್ತು ಚುನಾವಣಾ ಆಯೋಗಕ್ಕೆ ನೀಡಿದ ದೂರುಗಳ ಮಧ್ಯೆ ಅಸ್ಸಾಂನಲ್ಲಿ ಲೋಕಸಭಾ ಚುನಾವಣೆ 2024 ರ ಎರಡನೇ ಹಂತವು ಶುಕ್ರವಾರ ಮುಕ್ತಾಯಗೊಂಡಿದೆ. ಇಲ್ಲಿ 64.2 ರಷ್ಟು ತಾತ್ಕಾಲಿಕ ಮತದಾನವಾಗಿದೆ. ಮತದಾನವು “ಶಾಂತಿಯುತ” ಎಂದು ಚುನಾವಣಾ ಆಯೋಗ ಬಣ್ಣಿಸಿದೆ.
ಎರಡನೇ ಹಂತದಲ್ಲಿ 8.08 ಕೋಟಿ ಪುರುಷರು, 7.8 ಕೋಟಿ ಮಹಿಳೆಯರು ಮತ್ತು 5,929 ತೃತೀಯ ಲಿಂಗಿಗಳು ಸೇರಿದಂತೆ 15.88 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದರು.
ಅಸ್ಸಾಂನ ಸಿಲ್ಚಾರ್ ಕ್ಷೇತ್ರದ ಎರಡು ಮತಗಟ್ಟೆಗಳ ಮತದಾರರು ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟುಕೊಂಡು ಮತದಾನವನ್ನು ಬಹಿಷ್ಕರಿಸಿದರು. 110 ದುರ್ಗಾನಾರ್ ಬಗಾನ್ ಕಿರಿಯ ಪ್ರಾಥಮಿಕ ಶಾಲೆ ಮತ್ತು ಚಿತ್ತರಂಜನ್ ಓಣಿಯ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ.
ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಜಾವಗಲ್ ಶ್ರೀನಾಥ್ ಬೆಂಗಳೂರಿನ ವಿವಿಧ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು. ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಶೇ.52.81, ಬೆಂಗಳೂರು ಉತ್ತರದಲ್ಲಿ ಶೇ.54.42 ಹಾಗೂ ಬೆಂಗಳೂರು ದಕ್ಷಿಣದಲ್ಲಿ ಶೇ.53.15ರಷ್ಟು ಮತದಾನವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth