10:24 AM Saturday 23 - August 2025

ನಿರ್ಗಮಿಸುವ ಮೋದಿಗೆ ಹಿಂದೂ – ಮುಸ್ಲಿಂ ರಾಜಕೀಯ ಬಿಟ್ಟು ಬೇರೇನು ಗೊತ್ತಿಲ್ಲ: ಕಾಂಗ್ರೆಸ್ ವಾಗ್ದಾಳಿ

15/05/2024

ನಿರ್ಗಮಿಸುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಹಿಂದೂ – ಮುಸ್ಲಿಂ ರಾಜಕೀಯ ಬಿಟ್ಟು ಬೇರೇನು ಗೊತ್ತಿಲ್ಲ. ಮೋದಿಯ ಗ್ಯಾರಂಟಿ ಹಳ್ಳ ಹಿಡಿದಿದೆ. ಇದಲ್ಲದೆ 400 ಸಂಖ್ಯೆ ನಿಶ್ಚಿತ ಸಮಾಧಿ ಸ್ಥಿತಿಗೆ ಕೊಂಡೊಯ್ಯಲಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್, ನಿರ್ಗಮಿಸುವ ಪ್ರಧಾನಿ ಒಬ್ಬ ಮಹಾನ್‌ ಸುಳ್ಳುಗಾರ ಎಂದು ಇಡೀ ದೇಶಕ್ಕೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದ್ದಾರೆ.

ನಿರ್ಗಮಿಸುವ ಪ್ರಧಾನಿ ನಿರ್ಲಜ್ಜವಾಗಿ ಬಳಸಿದ ಕೋಮುವಾದಿ ಭಾಷೆ, ಸಂಕೇತಗಳು ಹಾಗೂ ಪ್ರಸ್ತಾಪಗಳು ಅವರು ತಮ್ಮ ಮನಸ್ಸಿನಿಂದ ಅಳಿಸಬಹುದು. ಆದರೆ ನಮ್ಮ ಮನಸ್ಸಿನಿಂದ ಅಳಿದು ಹೋಗುವುದಿಲ್ಲ. ನಾವು ಇದನ್ನು ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದೇವೆ. ಕ್ರಮ ಕೈಗೊಳ್ಳಬೇಕಾಗಿದೆ. ನೋವಿನ ಸಂಗತಿಯಂದರೆ ಕ್ರಮ ಜರುಗಿಸಲಾಗಿಲ್ಲ ಎಂದು ಜೈರಾಮ್‌ ರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version