ತಮಿಳುನಾಡಿನಲ್ಲಿ ದೋಸ್ತ್ ಪಾಲಿಟಿಕ್ಸ್: ಕಮಲ್‌ಹಾಸನ್ ಪಕ್ಷದ ಜತೆ ಡಿಎಂಕೆ ಒಪ್ಪಂದ

ತಮಿಳುನಾಡಿನ ಆಡಳಿತ ಡಿಎಂಕೆ ಪಕ್ಷವು, ನಟ ಕಮಲ್ ಹಾಸನ್ ರ ಮಕ್ಕಳ್ ನೀಧಿ ಮೈಯ್ಯಮ್ ಪಕ್ಷದ ಜೊತೆ ಒಪ್ಪಂದಕ್ಕೆ ಬಂದಿದೆ. ಕಮಲ್ ಹಾಸನ್ ರ ಪಕ್ಷ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ-ನೇತೃತ್ವದ ಮೈತ್ರಿಕೂಟವನ್ನು ಬೆಂಬಲಿಸಲಿದ್ದರೆ 2025 ರಾಜ್ಯಸಭಾ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಒಂದು ಸ್ಥಾನ ನೀಡಲು ಡಿಎಂಕೆ ಒಪ್ಪಿಕೊಂಡಿದೆ.
ಕಮಲ್ ಹಾಸನ್ ರ ಪಕ್ಷಕ್ಕೆ ಲೋಕಸಭಾ ಚುನಾವಣೆ ಸ್ಪರ್ಧಿಸಲು ಡಿಎಂಕೆ ಸ್ಥಾನ ನೀಡಲಿದೆ ಎಂಬ ನಿರೀಕ್ಷೆಗಳಿದ್ದವು. ಕಮಲ್ ಹಾಸನ್ ಹಾಗೂ ಡಿಎಂಕೆ ಮುಖ್ಯಸ್ಥರೂ ಆಗಿರುವ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಇಂದು ಡಿಎಂಕೆ ಮುಖ್ಯ ಕಾರ್ಯಾಲಯದಲ್ಲಿ ಎರಡೂ ಪಕ್ಷಗಳ ನಡುವಿನ ಒಪ್ಪಂದವನ್ನು ಅಂತಿಮಗೊಳಿಸಿದರು.
ದೇಶದ ಒಳಿತಿಗಾಗಿ ತಮ್ಮ ಪಕ್ಷ ಡಿಎಂಕೆ ಜೊತೆ ಮೈತ್ರಿ ಸಾಧಿಸಿದೆ ಎಂದು ಕಮಲ ಹಾಸನ್ ಹೇಳಿದ್ದಾರಲ್ಲದೆ ಯಾವುದೇ ಹುದ್ದೆ ಪಡೆಯುವ ಉದ್ದೇಶದಿಂದ ಅಲ್ಲ ಎಂದಿದ್ದಾರೆ. ಒಪ್ಫಂದದ ಅನುಸಾರ ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳಲ್ಲಿ ಕಮಲ ಹಾಸನ್ ಅವರ ಪಕ್ಷ ಪ್ರಚಾರ ನಡೆಸಲಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth