ಯುಪಿಯಲ್ಲಿ ಲಂಡನ್ ಸ್ನಾತಕೋತ್ತರ ಪದವೀಧರೆಯ ಕಮಾಲ್: ಬಿಜೆಪಿಯನ್ನು ಸೋಲಿಸಿದ ಇಕ್ರಾ ಹಸನ್

ಪಶ್ಚಿಮ ಉತ್ತರ ಪ್ರದೇಶದಿಂದ ಪೂರ್ವಾಂಚಲದವರೆಗೆ, ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದೆ. 2019 ರ ಚುನಾವಣೆಯಲ್ಲಿ ಪಡೆದ 62 ಸ್ಥಾನಗಳಿಗೆ ಹೋಲಿಸಿದರೆ ಕೇವಲ 33 ಸ್ಥಾನಗಳನ್ನು ಗಳಿಸಿದೆ.
ಪಶ್ಚಿಮ ಉತ್ತರ ಪ್ರದೇಶದ ಕೈರಾನಾ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಚೊಚ್ಚಲ ಅಭ್ಯರ್ಥಿ ಇಕ್ರಾ ಹಸನ್ ಅವರು ಬಿಜೆಪಿಯ ಪ್ರದೀಪ್ ಚೌಧರಿ ಅವರನ್ನು 69,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಹಸನ್ 5,28,013 (48.9%) ಮತಗಳನ್ನು ಪಡೆದರೆ, ಅವರ ಹತ್ತಿರದ ಪ್ರತಿಸ್ಪರ್ಧಿ ಚೌಧರಿ 4,58,897 (42.5%) ಮತಗಳನ್ನು ಪಡೆದಿದ್ದಾರೆ.
ಲಂಡನ್ ಸ್ಕೂಲ್ ಆಫ್ ಓರಿಯಂಟಲ್ ಅಂಡ್ ಆಫ್ರಿಕನ್ ಸ್ಟಡೀಸ್ ನ ಹಳೆಯ ವಿದ್ಯಾರ್ಥಿಯಾಗಿರುವ ಇಕ್ರಾ ಹಸನ್ ತನ್ನ ತಾಯಿ ತಬಸ್ಸುಮ್ ಹಸನ್ ಮತ್ತು ಮೂರು ಬಾರಿ ಶಾಸಕರಾಗಿದ್ದ ಸಹೋದರ ನಹೀದ್ ಹಸನ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಜಕೀಯಕ್ಕೆ ಧುಮುಕಿದರು.
ಸಹೋದರ ನಹೀದ್ 2022 ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಜೈಲಿನಿಂದ ಸ್ಪರ್ಧಿಸಿದಾಗ ಇಕ್ರಾ ಅವರು ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ತನ್ನ ಪ್ರಚಾರವನ್ನು ನಿರ್ವಹಿಸುತ್ತಿದ್ದರು.
ಈ ಲೋಕಸಭಾ ಚುನಾವಣೆಯಲ್ಲಿ ಅವರು ಸಮಾಜದ ಎಲ್ಲಾ ವಿಭಾಗಗಳಿಂದ ಮತಗಳನ್ನು ಪಡೆದಿದ್ದಾರೆ. ಯಾಕೆಂದರೆ ಜನರು ಅವರ ಸರಳತೆಯನ್ನು ಮೆಚ್ಚಿದ್ದರು.
ಇಕ್ರಾ ಹಸನ್ ಕಳೆದ ಒಂಬತ್ತು ವರ್ಷಗಳಿಂದ ಕೈರಾನಾ ಪ್ರದೇಶದ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅವರು ಮಾಜಿ ಸಂಸದ ತಬಸ್ಸುಮ್ ಹಸನ್ ಅವರ ಮಗಳಾಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth