ವಿಶ್ ಮಾಡುವ ನೆಪದಲ್ಲಿ ಸ್ಟೇಜ್ ಗೆ ಬಂದು ವರನ ಮೇಲೆ ದಾಳಿ ನಡೆಸಿದ ಪ್ರಿಯಕರ!

rajasthan
21/05/2024

ರಾಜಸ್ಥಾನ: ಮಾಜಿ ಗೆಳತಿಯ ವಿವಾಹಕ್ಕೆ ಆಗಮಿಸಿದ ಪ್ರಿಯಕರ ವಿಶ್ ಮಾಡುವ ನೆಪದಲ್ಲಿ ಸ್ಟೇಜ್ ಏರಿ, ಏಕಾಏಕಿ ವರನ ಮೇಲೆ ದಾಳಿ ನಡೆಸಿದ ಘಟನೆ  ರಾಜಸ್ಥಾನದ ಚಿತ್ತೋರ್ ಗಢ ಜಿಲ್ಲೆಯ ಭಿಲ್ವಾರದಲ್ಲಿ ನಡೆದಿದೆ.

ಶಂಕರ್ ಲಾಲ್ ಎಂಬಾತ ವರನಿಗೆ ಹಲ್ಲೆ ನಡೆಸಿದವನಾಗಿದ್ದು, ವಧು ಹಾಗೂ ಶಂಕರ್ ಲಾಲ್ ಇಬ್ಬರೂ ಒಂದೇ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಆ ವೇಳೆ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ನಂತರದ ಬೆಳವಣಿಗೆಯಲ್ಲಿ ಇಬ್ಬರ ನಡುವೆ ಬ್ರೇಕಪ್ ಆಗಿತ್ತು.

ಈ ಸೇಡು ತೀರಿಸಿಕೊಳ್ಳಲು ಶಂಕರ್ ಲಾಲ್ ಕಾಯುತ್ತಿದ್ದು, ಆಕೆಯ ಮದುವೆಯಂದು ವೇದಿಕೆ ಏರಿ ಏಕಾಏಕಿ ವರನ ಮೇಲೆ ಹಲ್ಲೆ ನಡೆಸಿದ್ದು, ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಅದೃಷ್ಟವಶಾತ್ ವರನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ.

ಈ ವೇಳೆ ತಕ್ಷಣವೇ ವರನ ಕಡೆಯವರು ವೇದಿಕೆ ಏರಿ, ಶಂಕರ್ ಲಾಲ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ

Exit mobile version