80ಕ್ಕೂ ಅಧಿಕ ಜನರ ಮೇಲೆ ದಾಳಿ ನಡೆಸಿದ ಹುಚ್ಚುನಾಯಿ!

dog
27/01/2023

ನವದೆಹಲಿ: ಬೀದಿ ನಾಯಿಯೊಂದು 80ಕ್ಕೂ ಅಧಿಕ ಜನರ ಮೇಲೆ ದಾಳಿ ನಡೆಸಿದ ಘಟನೆ ಬಿಹಾರದಲ್ಲಿ ನಡೆದಿದ್ದು, ನಾಯಿಯಿಂದ ಕಡಿತಕ್ಕೊಳಗಾದ ಸಂತ್ರಸ್ತರು ಅರ್ರಾಹ್ ನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

80 ಜನರಿಗೆ ಕೂಡ ಒಂದೇ ಬೀದಿ ನಾಯಿ ಕಚ್ಚಿದೆ. ಈ ನಾಯಿಯಿಂದ ಕಡಿತಕ್ಕೊಳದವರ ಪೈಕಿ 10—12 ಮಕ್ಕಳು ಕೂಡ ಸೇರಿದ್ದಾರೆ. ನಾಯಿಯಿಂದ ಕಡಿತಕ್ಕೊಳಗಾಗಿರುವ 80 ಜನರು ಅರ್ರಾಹ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಾ.ನವನೀತ್ ಕುಮಾರ್ ಚೌಧರಿ ತಿಳಿಸಿದ್ದಾರೆ.
ಇನ್ನೂ ನಾಯಿಯ ದಾಳಿಯ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ನಾಯಿಯನ್ನು ಸುಮಾರು 12 ಗಂಟೆ ರಾತ್ರಿಯ ವೇಳೆ ಪತ್ತೆ ಹಚ್ಚಿದ ಸ್ಥಳೀಯರ ಗುಂಪು ಹೊಡೆದು ಸಾಯಿಸಿದೆ.

ಇದು ರೇಬಿಸ್ ಸೋಂಕಿತ ನಾಯಿ ಎಂದು ಅನುಮಾನಿಸಲಾಗಿದ್ದು, ನಾಯಿ ಕಡಿತದಿಂದಾಗಿ ಇಡೀ ಗ್ರಾಮ ಆತಂಕಕ್ಕೊಳಗಾಗಿದೆ. ಈ ಪ್ರದೇಶ ಸೇರಿದಂತೆ ಇನ್ನೂ ವಿವಿಧ ಪ್ರದೇಶಗಳಲ್ಲಿ 100ಕ್ಕೂ ಅಧಿಕ ಜನರು ಇದೇ ನಾಯಿಯಿಂದ ಕಡಿತಕ್ಕೊಳಗಾಗಿದ್ದಾರೆ ಎನ್ನಲಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ

Exit mobile version