2:41 PM Thursday 23 - October 2025

ಪತಿ ಇಲ್ಲದ ನೋವಿನಲ್ಲಿದ್ದ ಗರ್ಭೀಣಿಗೆ ಮಾನಸಿಕ ‌ಕಿರುಕುಳ: ರಕ್ತ ಇದ್ದ ಹಾಸಿಗೆಯನ್ನು ಸ್ಪಚ್ಚಗೊಳಿಸು ಎಂದು ಬೆದರಿಸಿದ ಆಸ್ಪತ್ರೆ ಸಿಬ್ಬಂದಿ

02/11/2024

ಮಧ್ಯಪ್ರದೇಶದಲ್ಲಿ ಗರ್ಭಿಣಿಯ ಹತ್ರ ತನ್ನ ಪತಿ ಗುಂಡೇಟಿಗೆ ಒಳಗಾಗಿ ಆಸ್ಪತ್ರೆಗೆ ಬಂದ ವೇಳೆ ಚಿಕಿತ್ಸೆ ‌ಫಲಿಸದೇ ತೀರಿಕೊಂಡ ನಂತರ ರಕ್ತಸಿಕ್ತವಾಗಿದ್ದ ಆಸ್ಪತ್ರೆಯ ಹಾಸಿಗೆಯನ್ನು ಸ್ವಚ್ಛಗೊಳಿಸುವಂತೆ ಬೆದರಿಸಲಾಗಿದೆ ಎಂದು ಆರೋಪಿಸಲಾಗಿದೆ. ಅಕ್ಟೋಬರ್ 31 ರಂದು ನಡೆದ ಈ ಘಟನೆಯು ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯ ವೀಡಿಯೊ ವೈರಲ್ ಆದ ನಂತರ ವೈದ್ಯಕೀಯ ಸಿಬ್ಬಂದಿಯ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗಿದೆ.

ದಿಂಡೋರಿಯ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ (ಸಿಎಮ್ಎಚ್ಒ) ಹಲವಾರು ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡಿದ್ದಾರೆ.

ಈ ಘಟನೆ ಗರ್ದಾಸರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂಭವಿಸಿದ್ದು, ಅಲ್ಲಿ ತನ್ನ ಗಂಡನನ್ನು ಕಳೆದುಕೊಂಡಿದ್ದ 5 ತಿಂಗಳ ಗರ್ಭಿಣಿಯನ್ನು ತನ್ನ ಗಂಡನ ರಕ್ತದಿಂದ ಕೂಡಿದ ಆಸ್ಪತ್ರೆಯ ಹಾಸಿಗೆಯನ್ನು ಸ್ವಚ್ಛಗೊಳಿಸಲು ಕೇಳಲಾಯಿತು ಎಂದು ವರದಿಯಾಗಿದೆ. ಈ ಘಟನೆಯು ವ್ಯಾಪಕ ಖಂಡನೆಗೊಳಗಾಗಿದ್ದು, ಆರೋಗ್ಯ ಅಧಿಕಾರಿಗಳು ಈ ಕುರಿತು ತನಿಖೆ ‌ನಡೆಸುತ್ತಿದ್ದಾರೆ.

ಮಹಿಳೆಯ ಸಂಬಂಧಿಕರು ಔಪಚಾರಿಕ ದೂರು ನೀಡಿದ ನಂತರ, ತಕ್ಷಣದ ತನಿಖೆಯನ್ನು ಪ್ರಾರಂಭಿಸಲಾಯಿತು. ಪ್ರಾಥಮಿಕ ತನಿಖೆಯ ನಂತರ, ಗರ್ದಾಸರಿ ಸೌಲಭ್ಯದಲ್ಲಿ ನಿಯೋಜಿಸಲಾಗಿದ್ದ ವೈದ್ಯಕೀಯ ಅಧಿಕಾರಿ ಚಂದ್ರಶೇಖರ್ ಸಿಂಗ್ ಅವರನ್ನು ಮುಂದಿನ ಸೂಚನೆ ಬರುವವರೆಗೂ ಕರಂಜಿಯಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ವರ್ಗಾಯಿಸಲಾಗಿದೆ.

ಹೆಚ್ಚುವರಿಯಾಗಿ, ನರ್ಸಿಂಗ್ ಅಧಿಕಾರಿ ರಾಜ್ಕುಮಾರಿ ಮರವಿ ಮತ್ತು ವಾರ್ಡ್ ಅಟೆಂಡೆಂಟ್ ಛೋಟಿ ಬಾಯಿ ಠಾಕೂರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

ಇದರಲ್ಲಿ ಭಾಗಿಯಾಗಿರುವ ಎಲ್ಲಾ ಸಿಬ್ಬಂದಿ ಸದಸ್ಯರಿಗೆ ನೋಟಿಸ್ ನೀಡಲಾಗಿದೆ ಮತ್ತು ಅವರ ಪ್ರತಿಕ್ರಿಯೆಗಳನ್ನು ಮುಂದಿನ ಕ್ರಮಕ್ಕಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಕಳುಹಿಸಲಾಗುವುದು ಎಂದು ಡಾ. ಮರವಿ ಹೇಳಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version