8:42 AM Wednesday 10 - December 2025

ಮಡಿಕೇರಿ: ಆಲಿಕಲ್ಲು, ಬಿರುಗಾಳಿ ಸಹಿತ ಮಳೆಗೆ ಕಂಗಾಲಾದ ರೈತರು

19/02/2021

ಮಡಿಕೇರಿ:  ರಾಜ್ಯದ ವಿವಿಧೆಡೆಗಳಲ್ಲಿ ಮಳೆ ಬಂದು ರೈತರಿಗೆ ಸಮಸ್ಯೆ ಉಂಟಾಗಿದ್ದರೆ, ಇತ್ತ ಮಡಿಕೇರಿಯಲ್ಲಿ  ಶುಕ್ರವಾರ ಆಲಿಕಲ್ಲು ಮಳೆಯಾಗಿದ್ದು, ಜೊತೆಗೆ ಜೋರಾದ ಮಳೆಗೆ ಬೆಳೆಗಳು ನೆಲ ಕಚ್ಚಿವೆ.

ಶನಿವಾರ ಸಂತೆ ಹೋಬಳಿ ವ್ಯಾಪ್ತಿಯ ಮುಳ್ಳೂರು, ನಿಡ್ತ, ಅಂಕನಹಳ್ಳಿ, ಗುಡುಗಳಲೆಯಲ್ಲಿ ರಾಶಿ ರಾಶಿ ಆಲಿಕಲ್ಲು ಸುರಿದಿದಿದ್ದು, ರೈತರ ಬೆಳೆಗಳು ನೆಲ ಕಚ್ಚಿವೆ.

ಕಾಫಿ ತೋಟ, ರಸ್ತೆ, ಮನೆಯ ಚಾವಣಿ, ತೆಂಗಿನ ತೋಟ, ಅಡಿಕೆ ತೋಟ ಹಾಗೂ ಬಾಳೆ ತೋಟಗಳಲ್ಲಿ ಅಪಾರ ಪ್ರಮಾಣ ಆಲಿಕಲ್ಲು ಸುರಿದಿದೆ. ಆಲಿಕಲ್ಲು ಮಳೆಯಾಗುತ್ತಿರುವುದು ರೈತರ ಆತಂಕ ಹೆಚ್ಚಿಸಿದೆ.

 

ಇತ್ತೀಚಿನ ಸುದ್ದಿ

Exit mobile version