7:08 AM Saturday 6 - December 2025

ಮಗುವನ್ನು ಎತ್ತಿಕೊಂಡು ಮರ ಏರಿದ ಆಂಜನೇಯ ಎಂತಹ ಕೆಲಸ ಮಾಡಿದೆ ನೋಡಿ

14/02/2021

ತಂಜಾವೂರು: ಮನೆಯೊಳಗೆ ನುಗ್ಗಿದ ಮಂಗವೊಂದು ಮನೆಯೊಳಗೆ ಮಲಗಿದ್ದ 8 ತಿಂಗಳ ಶಿಶುವನ್ನು ಎತ್ತಿಕೊಂಡು ಹೋಗಿ ಮರದಿಂದ ಕೆಳಗಡೆ ಎಸೆದ ಆತಂಕಕಾರಿ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.

ಮಗು ಜೋರಾಗಿ ಅಳುತ್ತಿರುವ ಶಬ್ದವನ್ನು ಕೇಳಿ, ಏನೋ ಕೆಲಸ ಮಾಡುತ್ತಿದ್ದ ತಾಯಿ ಭುವನೇಶ್ವರಿ ಓಡಿ ಬಂದು ನೋಡಿದ್ದು, ಈ ವೇಳೆ ಮಗುವನ್ನು ಮಂಗ ಎತ್ತಿಕೊಂಡು ಮರಕ್ಕೆ ಏರಿದೆ.

ಇದರಿಂದ ಭಯಭೀತರಾದ ಅವರು, ಜೋರಾಗಿ ಕಿರುಚಿದ್ದು, ಈ ವೇಳೆ ಸ್ಥಳೀಯರು ಬಂದು ಮಗುವನ್ನು ರಕ್ಷಿಸಲು ನೋಡಿದ್ದಾರೆ. ಆದರೆ ಮರ ಏರಿ ಕುಳಿತಿದ್ದ ಆಂಜನೇಯ ಸ್ವಲ್ಪವೂ ಕರುಣೆಯೇ ಇಲ್ಲದೇ ಮಗುವನ್ನು ಮೇಲಿನಿಂದ ಕೆಳಗೆ ಎಸೆದಿದೆ. ಮಗು ಮೇಲಿನಿಂದ ನೆಲಕ್ಕ ಅಪ್ಪಳಿಸಿದ್ದು, ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಗು ಬದುಕುಳಿಯಲಿಲ್ಲ.

ಇತ್ತೀಚಿನ ಸುದ್ದಿ

Exit mobile version