7:56 AM Saturday 31 - January 2026

ಮಗುವಿಗೆ ಜನ್ಮ ನೀಡಿದ ಅತ್ಯಾಚಾರಕ್ಕೊಳಗಾದ 13ರ ಬಾಲಕಿ

19/02/2021

ಚಿತ್ರಕೂಟ: ಅತ್ಯಾಚಾರಕ್ಕೊಳಗಾಗಿದ್ದ 13 ವರ್ಷದ ಬಾಲಕಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು,  ಜನ್ಮ ನೀಡಿದ ಕೆಲವೇ ನಿಮಿಷದಲ್ಲಿ ಮಗು ಮೃತಪಟ್ಟಿದೆ.

ಕಳೆದ ಆಗಸ್ಟ್‌ ನಲ್ಲಿ  13 ವರ್ಷದ ಬಾಲಕಿಯ ಮೇಲೆ  ಆರೋಪಿ ಸಿಕಂದರ್‌ ಅಲಿಯಾಸ್ ಅಮರನಾಥ್‌ ತಿವಾರಿ ಎಂಬಾತ ತನ್ನ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದ. ಇದಾದ ಬಳಿಕ ಬೆದರಿಕೆ ಒಡ್ಡಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಇದರ ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಾಳೆ.

ಫೆ.7ರಂದು ಬಾಲಕಿ ಗರ್ಭಿಣಿಯಾಗಿರುವುದು ಪೋಷಕರಿಗೆ ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯನ್ನು ಫೆ9ರಂದು ಬಂಧಿಸಲಾಗಿದೆ. ಇನ್ನೂ ಸದ್ಯ ಬಾಲಕಿ ಜನ್ಮ ನೀಡಿರುವ ಮಗುವಿನ ಡಿಎನ್ ಎ ಪರೀಕ್ಷೆ ನಡೆಸಲಾಗುತ್ತಿದ್ದು, ಇದರ ವರದಿ ಆಧಾರಿಸಿ ಪೊಲೀಸರು ಮುಂದಿನ ಕ್ರಮಕೈಗೊಳ್ಳಲಿದ್ದಾರೆ.

ಇತ್ತೀಚಿನ ಸುದ್ದಿ

Exit mobile version