ಜತೆಯಲ್ಲಿ ವಾಸಿಸ್ತಿದ್ರು: ಗರ್ಭೀಣಿಯಾಗಿದ್ದ ಗೆಳತಿಯನ್ನೇ ಕತ್ತು ಹಿಸುಕಿ ಕೊಂದು ಬೆಂಕಿ ಹಚ್ಚಿ ಸುಟ್ಟ ಕಿರಾತಕ ಗೆಳೆಯ

13/02/2025

ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ಗರ್ಭಿಣಿಯಾಗಿದ್ದ ಗೆಳತಿಯನ್ನು ಕೊಂದು ಆಕೆಯ ಅರೆಬೆತ್ತಲೆ ದೇಹವನ್ನು ಸುಟ್ಟ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿ ಪೊಲೀಸ್ ರಿಮಾಂಡ್ ಗೆ ಕಳುಹಿಸಲಾಗಿದೆ.

ಆರೋಪಿಯನ್ನು ಶಕೀಲ್ ಮುಸ್ತಫಾ ಸಿದ್ದಿಕಿ (38) ಎಂದು ಗುರುತಿಸಲಾಗಿದೆ. ಮೊದಲು ತನ್ನ 18 ವರ್ಷದ ಗೆಳತಿಯನ್ನು ಕತ್ತು ಹಿಸುಕಿ ಕೊಂದು ನಂತರ ಹತ್ತಿರದ ಅರಣ್ಯ ಪ್ರದೇಶದ ಏಕಾಂತ ಸ್ಥಳದಲ್ಲಿ ಆಕೆಯ ದೇಹಕ್ಕೆ ಬೆಂಕಿ ಹಚ್ಚಿದ್ದಾನೆ. ಇವರಿಬ್ಬರು ಕೆಲವು ಸಮಯದಿಂದ ಸಂಬಂಧದಲ್ಲಿದ್ದರು. ಆದರೆ ಶಕೀಲ್ ತನ್ನ ಗೆಳತಿಯನ್ನು ತೊರೆಯಲು ಬಯಸಿದ್ದ. ಆದರೆ ಅವಳು ಗರ್ಭಿಣಿಯಾದ ನಂತರ ಅವನೊಂದಿಗೆ ಇರಲು ಬಯಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸ್ ಠಾಣೆಯ ಉಸ್ತುವಾರಿ ಅಜಯ್ ಭೂಸಾರಿ ಮತ್ತು ಅವರ ತಂಡವು ಹೊಲದಲ್ಲಿ ಅರೆಬೆತ್ತಲೆ ಶವ ಬಿದ್ದಿದ್ದ ಸ್ಥಳಕ್ಕೆ ತಲುಪಿದಾಗ ದೇಹ ಸಂಪೂರ್ಣವಾಗಿ ಸುಟ್ಟುಹೋಗಿದೆ. ಪೊಲೀಸರು ತನಿಖೆಯನ್ನು ಪ್ರಾರಂಭಿಸಿ ಕೆಲವೇ ಗಂಟೆಗಳಲ್ಲಿ ಆರೋಪಿ ಶಕೀಲ್ ನನ್ನು ಪತ್ತೆಹಚ್ಚಿದ್ದಾರೆ. ಆರೋಪಿಯನ್ನು‌ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕೋರ್ಟ್ ಆರೋಪಿಯನ್ನು ಪೊಲೀಸ್ ರಿಮಾಂಡ್ ಗೆ ನೀಡಿದೆ.

ಮೊದಲಿಗೆ ಇದು ಕೊಲೆಯಂತೆ ಕಂಡಿದೆ. ಈ ಪ್ರಕರಣದ ತನಿಖೆಯನ್ನು ಸ್ಥಳೀಯ ಅಪರಾಧ ವಿಭಾಗ ಮತ್ತು ಗೋರೆಗಾಂವ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ, ಅಪರಿಚಿತ ಹುಡುಗಿಯನ್ನು ಗುರುತಿಸಲು ಮತ್ತು ಅವಳ ಕೊಲೆಯ ರಹಸ್ಯವನ್ನು ಬಿಚ್ಚಿಡಲು ವಿವಿಧ ತಂಡಗಳನ್ನು ರಚಿಸಲಾಯಿತು. ತನಿಖೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಅಜಯ್ ಭೂಸಾರಿ ತಿಳಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version