4:41 AM Wednesday 15 - October 2025

ಮಹಾಶಿವರಾತ್ರಿ ಪೂಜೆಯ ಪ್ರಸಾದ ಸೇವಿಸಿದ ಭಕ್ತರಿಗೆ ವಾಂತಿ, ಭೇದಿ!

12/03/2021

ಡಂಗೂರಪುರ: ಶಿವರಾತ್ರಿಯ ವಿಶೇಷ ಪೂಜೆಯ ಬಳಿಕ ವಿತರಿಸಲಾಗಿದ್ದ ಪ್ರಸಾದ ಸೇವಿಸಿದ ಭಕ್ತರಿಗೆ ವಾಂತಿ, ಭೇದಿಯಾಗಿದ್ದು, ಪರಿಣಾಮ 120ಕ್ಕೂ ಅಧಿಕ ಭಕ್ತರು ಅಸ್ವಸ್ಥಗೊಂಡ ಘಟನೆ ಖಲೀಲ್‌‌ ಗ್ರಾಮದ ರಾಮೇಶ್ವರ ದೇವಸ್ಥಾನದಲ್ಲಿ ನಡೆದಿದೆ.

ಪ್ರಸಾದ ಸೇವಿಸಿ ಕೆಲವು ಹೊತ್ತಿನಲ್ಲಿಯೇ ಭಕ್ತರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ.  ಈ ವೇಳೆ ತಕ್ಷಣವೇ ಅವರು ಜಿಲ್ಲಾ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಕೇಂದ್ರ ಹಾಗೂ ಪೂನ್ ಪುರ ಮತ್ತು ಬಂಕೋಡ ಆರೋಗ್ಯ ಕೇಂದ್ರಗಳ ವೈದ್ಯಕೀಯ ತಂಡಗಳು ಅಸ್ವಸ್ಥರಿಗೆ ಚಿಕಿತ್ಸೆ ನೀಡಿದೆ.

ಮಹಾಶಿವರಾತ್ರಿ ಪ್ರಯುಕ್ತ ಸಾಗೋ, ಖಚ್ಡಿ ಹಾಗೂ ಮಜ್ಜಿಗೆಯನ್ನು ಭಕ್ತರಿಗೆ ವಿತರಿಸಲಾಗಿದೆ. ಇದನ್ನು ತಿಂದು ಕೆಲವೇ ಹೊತ್ತಿನಲ್ಲಿ ಭಕ್ತರಿಗೆ ಹೊಟ್ಟೆ ನೋವು ವಾಂತಿ, ಭೇದಿ ಆರಂಭವಾಗಿದೆ.

ಇನ್ನೂ ಸ್ಥಳಕ್ಕೆ ಆಗಮಿಸಿರುವ ಆರೋಗ್ಯ ಅಧಿಕಾರಿಗಳು ಪ್ರಸಾದದ ಮಾದರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಪ್ರಸಾದದಲ್ಲಿ ಏನಿತ್ತು ಎನ್ನುವುದು ತನಿಖೆಯ ವರದಿಯ ಬಳಿಕ ತಿಳಿದು ಬರಬೇಕಿದೆ

ಇತ್ತೀಚಿನ ಸುದ್ದಿ

Exit mobile version