ಮಹಿಷಾ ದಸರಾ: ಸಂಘರ್ಷಕ್ಕೂ ಸೈ, ಹೊಡೆದಾಟಕ್ಕೂ ಸೈ: ಪ್ರತಾಪ್ ಸಿಂಹ

PRATHAP
10/10/2023

ಮೈಸೂರು: ಮಹಿಷಾ ದಸರಾ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದು, ನಾವು ಸಂಘರ್ಷಕ್ಕೂ ಸೈ, ಹೊಡೆದಾಟಕ್ಕೂ ಸೈ , ಎಲ್ಲದಕ್ಕೂ ಸಿದ್ಧರಾಗಿ ಚಾಮುಂಡಿ ಬೆಟ್ಟ ಚಲೋ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಈಗಲೇ ಇವರನ್ನ ಸದೆಬಡಿಯಬೇಕು, ಇಲ್ಲದಿದ್ದರೆ ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗಿ, ವೀರಪ್ಪನ್ ನಮ್ಮ ದೇವರು, ಮೂಲ ಪುರುಷ ಅಂತ ಹೇಳಿ ಮಲೈ ಮಹದೇಶ್ವರನನ್ನು ದೆವ್ವ ಮಾಡುತ್ತಾರೆ, ವೀರಪ್ಪನ್ ಮೂಲನಿವಾಸಿ, ಅವನು ಪ್ರಕೃತಿ ರಕ್ಷಕ ಅಂತಾ ಕಥೆ ಕಟ್ಟಿ ಮಲೈ ಮಹದೇಶ್ವರನನ್ನು ದೆವ್ವ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಅಕ್ಟೋಬರ್ 13ರಂದು ಬೆಳಗ್ಗೆ 8 ಗಂಟೆಗೆ ಚಲೋ ಚಾಮುಂಡಿ ಬೆಟ್ಟ ಜಾಥಾ ಹಮ್ಮಿಕೊಂಡಿದ್ದು, ಐದು ಸಾವಿರಕ್ಕೂ ಹೆಚ್ಚು ಜನರು ಜಾಥಾದಲ್ಲಿ ಭಾಗಿಯಾಗಲಿದ್ದಾರೆ. ಚಾಮುಂಡಿಗೆ ಪೂಜೆ ಮಾಡಿ, ಮಹಿಷಾಸುರನ ಮುಂದೆ ಕುಳಿತುಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ಇತ್ತೀಚಿನ ಸುದ್ದಿ

Exit mobile version