ಗಾಝಾಗೆ ಬೆಂಬಲ: ಇಸ್ರೇಲಿ ದಾಳಿಯನ್ನು ಪ್ರಶ್ನಿಸಿದ ನೊಬೆಲ್ ವಿಜೇತೆ ಮಲಾಲ

ಗಾಝಾದ ಮೇಲೆ ಇಸ್ರೇಲಿ ದಾಳಿಯನ್ನು ಪ್ರಶ್ನಿಸಿರುವ ನೊಬೆಲ್ ಪಾರಿತೋಷಕ ವಿಜೇತೆ ಮಲಾಲ ಗಾಝಾಕ್ಕೆ ಬೆಂಬಲ ಸೂಚಿಸಿದ್ದಾರೆ. ಗಾಝಾದ ಜನರಿಗೆ ನನ್ನ ಬೆಂಬಲದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದವರು ಹೇಳಿದ್ದಾರೆ.
ತಕ್ಷಣ ಕದನ ವಿರಾಮ ಏರ್ಪಡಿಸಬೇಕು ಎಂದು ಹೇಳುವುದಕ್ಕೆ ಮೃತ ದೇಹಗಳನ್ನೋ ಉರುಳಿ ಬಿದ್ದ ಕಟ್ಟಡಗಳನ್ನೋ ಅಥವಾ ಹೆಣವಾಗಿರುವ ಮಕ್ಕಳನ್ನೋ ನೋಡಿಯೇ ಆಗಬೇಕಿಲ್ಲ. ಅಂತಾರಾಷ್ಟ್ರೀಯ ನಿಯಮಗಳನ್ನು ಗಾಳಿಗೆ ತೂರಿದ ಇಸ್ರೇಲನ್ನು ಮುಂದೆಯೂ ನಾನು ಪ್ರಶ್ನಿಸುತ್ತೇನೆ ಎಂದು ಮಲಾಲ ಹೇಳಿದ್ದಾರೆ.
ಫೆಲೆಸ್ತೀನ್ ವಿರುದ್ಧ ಇಸ್ರೇಲ್ ನ ದಾಳಿಯನ್ನು ಸಮರ್ಥಿಸುತ್ತಿರುವ ಅಮೆರಿಕಾದ ಮಾಜಿ ರಾಜ್ಯ ಕಾರ್ಯದರ್ಶಿ ಹಿಲರಿ ಕ್ಲಿ0ಟನ್ ಅವರ ಜೊತೆ ಸೇರಿ ಮಲಾಲ ಮ್ಯೂಸಿಕ್ ಶೋ ನಿರ್ಮಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆ ಬಳಿಕ ಅವರ ಈ ಹೇಳಿಕೆ ಹೊರಬಿದ್ದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth