26,000 ಶಿಕ್ಷಕರ ಉದ್ಯೋಗ ಕಸಿದುಕೊಂಡ ಬಿಜೆಪಿ: ಬಂಗಾಳದ ಜನರು ನಿಮ್ಮನ್ನು ಕ್ಷಮಿಸಲ್ಲ ಎಂದ ಮಮತಾ ಬ್ಯಾನರ್ಜಿ

ಸುಮಾರು 26,000 ಶಿಕ್ಷಕರ ಜೀವನೋಪಾಯವನ್ನು ಕಸಿದುಕೊಳ್ಳಲು ಪಿತೂರಿ ನಡೆಸಿದ ಬಿಜೆಪಿ ನಾಯಕರನ್ನು ಪಶ್ಚಿಮ ಬಂಗಾಳದ ಜನರು ಕ್ಷಮಿಸುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿಯನ್ನು “ಉದ್ಯೋಗಭಕ್ಷಕ” ಎಂದು ಕರೆದಿದ್ದಾರೆ.
ಟಿಎಂಸಿಯ ಘಟಾಲ್ ಅಭ್ಯರ್ಥಿ ದೇವ್ ಅವರನ್ನು ಬೆಂಬಲಿಸಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ಸಿಪಿಐ (ಎಂ) ಮತ್ತು ಕಾಂಗ್ರೆಸ್ ವಿರುದ್ಧ ಒಂದೇ ಉಸಿರಿನಲ್ಲಿ ದಾಳಿ ನಡೆಸಿದ್ರು.
ನೀವು ನರಭಕ್ಷಕ ಹುಲಿಗಳ ಬಗ್ಗೆ ಕೇಳಿದ್ದೀರಿ. ಆದರೆ ಉದ್ಯೋಗಭಕ್ಷಕ ಬಿಜೆಪಿ ಬಗ್ಗೆ ಕೇಳಿದ್ದೀರಾ..?
ನ್ಯಾಯಾಲಯದಿಂದ ಅನೇಕ ಜನರು ನಿರುದ್ಯೋಗಿಗಳಾದ ನಂತರ ಬಿಜೆಪಿ, ಸಿಪಿಐ (ಎಂ) ಮತ್ತು ಕಾಂಗ್ರೆಸ್ ನಾಯಕರ ಮುಖದಲ್ಲಿ ಸಂತೋಷವನ್ನು ನೀವು ನೋಡಿದ್ದೀರಾ?” ಎಂದು ಅವರು ರ್ಯಾಲಿಯಲ್ಲಿ ಜನರನ್ನು ಪ್ರಶ್ನಿಸಿದರು.
ನಾನು ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಲು ಅಥವಾ ನ್ಯಾಯಾಧೀಶರ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ. ಆದರೆ 26,000 ಯುವಕರ ಉದ್ಯೋಗವನ್ನು ಕಸಿದುಕೊಂಡ ನಂತರ, ನೀವು ಅವರಿಗೆ ಶೇಕಡಾ 12 ರಷ್ಟು ಬಡ್ಡಿಯೊಂದಿಗೆ ಸಂಬಳವನ್ನು ಹಿಂದಿರುಗಿಸಲು ಕೇಳುತ್ತಿದ್ದೀರಿ. ನೀವು ಅಂತಹ ಉದ್ಯೋಗಗಳನ್ನು ತೆಗೆದುಕೊಳ್ಳಬಹುದೇ? ಸರಿಪಡಿಸಲು ಅವರಿಗೆ ಅವಕಾಶ ನೀಡಿ. 26,000 ಜನರನ್ನು ಈ ರೀತಿ ನಡೆಸಿಕೊಳ್ಳಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆ -2016 (ಎಸ್ಎಲ್ಎಸ್ಟಿ) ನೇಮಕಾತಿ ಪ್ರಕ್ರಿಯೆಯ ಮೂಲಕ ಮಾಡಿದ 25,753 ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿಯನ್ನು ರದ್ದುಗೊಳಿಸುವಂತೆ ಕಲ್ಕತ್ತಾ ಹೈಕೋರ್ಟ್ ಸೋಮವಾರ ಆದೇಶಿಸಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth