4:56 PM Wednesday 27 - August 2025

ರಾತ್ರಿ ಮಾಂಸ ತಿಂದು ಬೆಳಗ್ಗೆ ದೇವಸ್ಥಾನಕ್ಕೆ ಹೋದ್ರೆ ಆಗುತ್ತೆ, ಮಧ್ಯಾಹ್ನ ತಿಂದು ಸಂಜೆ ಹೋದ್ರೆ ಆಗಲ್ವಾ?: ಸಿದ್ದರಾಮಯ್ಯ ಪ್ರಶ್ನೆ

siddaramaiha
21/08/2022

ವೀರಾಜಪೇಟೆಯಲ್ಲಿ ಮಾಂಸದೂಟ ಮಾಡಿ ಸಿದ್ದರಾಮಯ್ಯನವರು ದೇವಸ್ಥಾನಕ್ಕೆ ಹೋಗಿದ್ದಾರೆ ಎನ್ನುವ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಸಿದ್ದರಾಮಯ್ಯ, ಬಿಜೆಪಿಯವರಿಗೆ ಮೊಸರಲ್ಲಿ ಕಲ್ಲು ಹುಡುಕುವುದೇ ಕೆಲಸ ಎಂದಿದ್ದಾರೆ.

ನಾಟಿ ಕೋಳಿ ಊಟ ಮಾಡಿ ಸಿದ್ದರಾಮಯ್ಯ ಬಸವ ದೇವಸ್ಥಾನಕ್ಕೆ ಹೋಗಿದ್ದೀರಿ ಎಂದು ಅಪ್ಪಚ್ಚು ರಂಜನ್ ಅವರು ಆರೋಪ ಮಾಡಿದ್ದಾರೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮಧ್ಯಾಹ್ನ ಸುದರ್ಶನ್ ಹೊಟೇಲ್ ನಲ್ಲಿ ಊಟ ಮಾಡಿದ್ದೆ. ಸಾಯಂಕಾಲ ಹೋಗುವಾಗ ಅಲ್ಲಿ ಪೂಜೆ ಮಾಡಿ ಹೋಗಿದ್ದೇವೆ ಎಂದರು.

ದೇವರು ಇಂತಿಂಥದ್ದನ್ನೇ ತಿಂದು ಬನ್ನಿ ಎಂದು ದೇವರು ಹೇಳಿದ್ದಾರಾ?  ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಹಿಂದಿನ ದಿನ ತಿಂದು ಹೋದ್ರೆ…? ರಾತ್ರಿ ತಿಂದ್ಬಿಟ್ಟು ಬೆಳಗ್ಗೆ ಹೋಗ್ಬಹುದು, ಮಧ್ಯಾಹ್ನ ತಿಂದು ಸಾಯಂಕಾಲ ಹೋಗ್ಲಿಕ್ಕೆ ಆಗಲ್ವಾ?  ಎಂದು ಪ್ರಶ್ನಿಸಿದರು.

ಈ ಬಿಜೆಪಿಯವರಿಗೆ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ. ಎಲ್ಲಿ ಚೆನ್ನಾಗಿದ್ದಾರೆ ಅಲ್ಲಿ ಬೆಂಕಿ ಹಾಕಿ ಬರೋದು, ಅಲ್ಲಿ ವಿಷ ಹಾಕಿ ಬರೋದು. ಇದು ಅವರ ಕೆಲಸ ಎಂದು ತಿರುಗೇಟು ನೀಡಿದ್ರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version