11:11 PM Wednesday 15 - October 2025

ಬಿಎಸ್ ಪಿ ಟಿಕೆಟ್ ಗೆ ಮಾಯಾವತಿ 2 ಕೋಟಿ ರೂ. ಕೇಳಿದರೆಂದು ಡೆತ್ ನೋಟ್ ಬರೆದಿಟ್ಟು ವ್ಯಾಪಾರಿ ಆತ್ಮಹತ್ಯೆ!

30/10/2020

ಉತ್ತರಪ್ರದೇಶ: ಬಹುಜನ ಸಮಾಜ ಪಾರ್ಟಿ(ಬಿಎಸ್ ಪಿ)ಯಿಂದ 2022ರ ವಿಧಾನಸಭಾ ಚುನಾವಣೆಗೆ ಸ್ಪರ್ಧಾಕಾಂಕ್ಷಿಯಾಗಿದ್ದ ವ್ಯಾಪಾರಿಯೊಬ್ಬ ಬಿಎಸ್ ಪಿಯಿಂದ ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.


ಡೆತ್ ನೋಟ್ ನಲ್ಲಿ ಗಂಭೀರ ಆರೋಪ ಮಾಡಿರುವ ಆತ್ಮಹತ್ಯೆಗೆ ಶರಣಾಗಿರುವ ವ್ಯಾಪಾರಿ ಮುನ್ನೂ ಪ್ರಸಾದ್,  ತಾನು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೇಳಿದಾಗ  2 ಕೋಟಿ ರೂಪಾಯಿಗಳನ್ನು ನೀಡುವಂತೆ ಮಾಯಾವತಿ ಒತ್ತಾಯಿಸಿದರು. ಆದರೆ ಈ ಮೊತ್ತವನ್ನು ಭರಿಸುವ ಶಕ್ತಿ ನನ್ನಲ್ಲಿಲ್ಲ, ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾನೆ.


ಇನ್ನೂ ಈ ವಿಚಾರವಾಗಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸೋನಿ ಅವರು ಮಾತನಾಡಿ, ಈ ಪ್ರಕರಣ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಡೆತ್ ನೋಟ್ ನಲ್ಲಿರುವ ವಿಚಾರದ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳುವವರೆಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.


ಈ ನಡುವೆ ಪಕ್ಷದ ಜಿಲ್ಲಾ ಬಿಎಸ್ ಪಿ ಸಂಯೋಜಕ ಈ ಕುರಿತು ಪ್ರತಿಕ್ರಿಯಿಸಿ, ಈ ವ್ಯಾಪಾರಿಗೆ ಬಿಎಸ್ ಪಿಯ ಜೊತೆಗೆ ಯಾವುದೇ ಸಂಬಂಧವಿರಲಿಲ್ಲ. ಈ ಆತ್ಮಹತ್ಯೆ ಪತ್ರವು ಬಿಎಸ್ ಪಿಯ ವಿರುದ್ಧ ಅಪಪ್ರಚಾರ ಮಾಡುವ ಉದ್ದೇಶದಿಂದ ಮಾಡಲಾಗಿದೆ ಎಂದು ಹೇಳಿದರು.


ಈ ಬಗ್ಗೆ ಸಾರ್ವಜನಿಕರ ಹೇಳಿಕೆ ಏನಿದೆಯಂದರೆ. “ ವ್ಯಾಪಾರಿ ಮುನ್ನೂ ಪ್ರಸಾದ್ ಅವರು, ಬಿಎಸ್ ಪಿಯಲ್ಲಿ ಸಕ್ರಿಯರಾಗಿದ್ದರು. ಬಿಎಸ್ ಪಿಯ ಪ್ರತಿ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ಮತ್ತು ಇಲ್ಲಿನ ಬಿಎಸ್ ಪಿ ಅಧ್ಯಕ್ಷರು ಕೂಡ ಕಾರ್ಯಕ್ರಮವೊಂದರಲ್ಲಿ ಮುನ್ನೂ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಹೇಳಿದ್ದರು ಎಂದು ಮಾಹಿತಿ ನೀಡಿದ್ದಾರೆ.


ಇತ್ತೀಚಿನ ಸುದ್ದಿ

Exit mobile version