ಫೈವ್ ಸ್ಟಾರ್ ಹೋಟೆಲ್ ನಲ್ಲಿ ಮಸ್ತ್ ಎಂಜಾಯ್: 3.65 ಲಕ್ಷ ಬಿಲ್ ಪಾವತಿಸದ ವ್ಯಕ್ತಿಗೆ ಕೊನೆಗೆ ಏನಾಯ್ತು ಗೊತ್ತಾ..?

ತನ್ನ ಕುಟುಂಬದೊಂದಿಗೆ ದಿಲ್ಲಿಯ ಲುಟಿಯೆನ್ಸ್ ಫೈವ್ ಸ್ಟಾರ್ ಹೋಟೆಲ್ ನಲ್ಲಿ ತಂಗಿದ್ದಕ್ಕಾಗಿ 3.65 ಲಕ್ಷ ರೂಪಾಯಿಗಳ ಬಿಲ್ ಪಾವತಿಸಲು ನಿರಾಕರಿಸಿದ ಆರೋಪದಡಿಯಲ್ಲಿ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.
ಆರೋಪಿತ ವ್ಯಕ್ತಿ ಮತ್ತು ಅವರ ಕುಟುಂಬವು ಮೇ 28 ರಂದು ಎರಡು ಸಿಂಗಲ್ ಆಕ್ಯುಪೆನ್ಸಿ ಕೊಠಡಿಗಳನ್ನು ಕಾಯ್ದಿರಿಸಿದ್ದರು ಎಂದು ಹೋಟೆಲ್ ನ ಸಹಾಯಕ ವ್ಯವಸ್ಥಾಪಕರು ತಿಳಿಸಿದ್ದಾರೆ.
ಆದರೆ ಮೇ 31 ರಂದು ಹೊಟೇಲ್ ನಿಂದ ಚೆಕ್ ಔಟ್ ಆಗುವಾಗ ನಾವು ಬ್ಯಾಂಕ್ ವರ್ಗಾವಣೆಯ ಮೂಲಕ ಈಗಾಗಲೇ 6,50,000 ರೂಪಾಯಿಗಳನ್ನು ಪಾವತಿಸಿದ್ದೇನೆ ಎಂದು ಹೇಳಿ ನಕಲಿ ಪಾವತಿ ಸಂಖ್ಯೆಗಳನ್ನು ತೋರಿಸಿದ್ದಾನೆ.
ಇದನ್ನು ಹೊಟೇಲ್ ಸಿಬ್ಬಂದಿ ಪರಿಶೀಲಿಸಿದಾಗ ಅಂತಹ ಯಾವುದೇ ವಹಿವಾಟು ನಡೆದಿರುವುದು ಕಂಡುಬಂದಿಲ್ಲ. ಈ ಕುರಿತು ಆರೋಪಿತ ವ್ಯಕ್ತಿಯನ್ನು ಪ್ರಶ್ನೆ ಮಾಡಿದಾಗ ತಬ್ಬಿಬ್ಬಾದ ಆರೋಪಿತ ಜೂನ್ 3 ರಂದು ಪಾವತಿ ಮಾಡಲಾಗುವುದು ಎಂದು ಭರವಸೆ ನೀಡಿದ್ದ.
ಆದರೆ ನಿಗದಿತ ದಿನದಂದು ಆರೋಪಿತ ವ್ಯಕ್ತಿಯು 3.65 ಲಕ್ಷ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಹೊಟೇಲ್ ಸಹಾಯಕ ವ್ಯವಸ್ಥಾಪಕರು ನೀಡಿದ ದೂರಿನಂತೆ ಎಫ್ ಐಆರ್ ದಾಖಲಾಗಿ ವ್ಯಕ್ತಿಯನ್ನು ಬಂಧಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw