1:09 PM Thursday 16 - October 2025

ಮನೆ ಕೆಲಸದ ಮಹಿಳೆಗೆ ಚಿತ್ರ ಹಿಂಸೆ ನೀಡಿದ ಹತ್ಯೆ ಮಾಡಿದ ಭಾರತೀಯ ಮೂಲದ ಮಹಿಳೆ | ಉಪವಾಸ ಕೆಡವಿ, ಕಿಟಕಿಗೆ ಕಟ್ಟಿ ಹಾಕಿ ಚಿತ್ರ ಹಿಂಸೆ

24/02/2021

ಸಿಂಗಾಪುರ: ಮನೆಕೆಲಸದಾಕೆಯನ್ನು ಭಾರತೀಯ ಮೂಲದ ಮಹಿಳೆಯೊಬ್ಬಳು ಚಿತ್ರ ಹಿಂಸೆ ನೀಡಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಗಾಯತ್ರಿ ಮುರುಗಯನ್ ಎಂಬ ಭಾರತೀಯ ಮಹಿಳೆ 24 ವರ್ಷ ವಯಸ್ಸಿನ ಮ್ಯಾನ್ಮಾರ್ ಮೂಲದ ಯುವತಿಯ ಮೇಲೆ ಘೋರ ದೌರ್ಜನ್ಯ ಎಸಗಿದ್ದಾರೆ.

ಮನೆಗೆ ಕೆಲಸಕ್ಕೆ ಸೇರಿಸಿಕೊಂಡ ಐದು ತಿಂಗಳಿನಲ್ಲಿಯೇ ತನ್ನ ಬುದ್ಧಿ ತೋರಿಸಿದ್ದ ಗಾಯತ್ರಿ, ಮ್ಯಾನ್ಮಾರ್ ನ ಪ್ರಿಯಾಂಗ್ ನಾ ಡಾನ್ ಎಂಬ ಬಡ ಮಹಿಳೆಗೆ ಗುದ್ದುವುದು, ನಿಂದಿಸುವುದು, ಉಪವಾಸ ಹಾಕುವುದು ಮೊದಲಾದ ಚಿತ್ರ ಹಿಂಸೆ ನೀಡುತ್ತಿದ್ದಳು.ಕೊನೆಗೆ ಕಸದ ಬುಟ್ಟಿಯಿಂದ ಆಹಾರ ಹೆಕ್ಕಿ ತಿನ್ನುವ ಮಟ್ಟಕ್ಕೆ ಆಕೆ ಉಪವಾಸ ಕೆಡವಿದ್ದಳು. ಇದರಿಂದಾಗಿ ಮಹಿಳೆಯ ತೂಕ 24 ಕೆ.ಜಿ.ಗೆ ಬಂದು ತಲುಪಿದೆ.

ಮಹಿಳೆಯನ್ನು ಉಪವಾಸ ಕೆಡವುದಲ್ಲದೇ ಕಿಟಕಿಯ ಗ್ರಿಲ್ ಗೆ ಕಟ್ಟಿ ಹಾಕಿ ರಾತ್ರಿಯ ವೇಳೆ ಮಹಿಳೆಗೆ ಈಕೆ ಥಳಿಸುತ್ತಿದ್ದಳು. ಪ್ರಿಯಾಂಗ್ ನಾ ಡಾನ್ ಅವರ ಕುತ್ತಿಗೆ ಹಾಗೂ  ಮೆದುಳಿಗೆ ಸಾವಿಗೂ  ಮೊದಲಿನ ದಿನ ತೀವ್ರವಾದ ಗಾಯಗಳಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯತ್ರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಒಟ್ಟು 28 ಆರೋಪಗಳಲ್ಲಿ ಗಾಯತ್ರಿ ತಪ್ಪೊಪ್ಪಿಗೆ ನೀಡಿದ್ದಾಳೆ. ತನ್ನ ಮೂರು ವರ್ಷದ ಮಗುವಿನ ಪೋಷಣೆಗಾಗಿ ಮ್ಯಾನ್ಮಾರ್ ನಿಂದ ಸಿಂಗಾಪುರಕ್ಕೆ ಬಂದು ಕೆಲಸ ಮಾಡುತ್ತಿದ್ದ ಪ್ರಿಯಾಂಗ್ ನಾ ಡಾನ್ ಅವರ ದುರಂತ ಅಂತ್ಯವಾಗಿದೆ

ಇತ್ತೀಚಿನ ಸುದ್ದಿ

Exit mobile version