10:40 AM Saturday 23 - August 2025

ಮಹಿಳೆಯರು ಮನೆಯಲ್ಲಿಯೇ ಇರಿ, ಇಲ್ಲವಾದರೆ ಉಗ್ರರು ನಿಮ್ಮನ್ನು ದುರುಪಯೋಗಪಡಿಸಿಕೊಳ್ಳಬಹುದು | ತಾಲಿಬಾನ್ ನಾಯಕ

afgan
25/08/2021

ಅಫ್ಘಾನಿಸ್ತಾನ: ಮಹಿಳೆಯರಿಗೆ ಇಸ್ಲಾಮ್ ನ ಮಿತಿಯೊಳಗೆ ಕೆಲಸ ಮಾಡಲು, ಶಿಕ್ಷಣ ಪಡೆಯಲು ಅವಕಾಶ ನೀಡುತ್ತೇವೆ ಎಂದು ತಾಲಿಬಾನ್ ಹೇಳಿದ್ದರೂ ಸಹ, ಮಹಿಳೆಯರು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬೇಡಿ, ಮನೆಯಲ್ಲೇ ಇರಿ ಎಂದು ತಾಲಿಬಾನ್ ಉಗ್ರ ನಾಯಕರು ಹೇಳಿದ್ದು, ಇದರ ಹಿಂದಿನ ಉದ್ದೇಶವೇನು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

ಮಹಿಳೆಯರಿಗೆ ಇಸ್ಲಾಂನ ಮಿತಿಯೊಳಗೆ ಸ್ವಾತಂತ್ರ್ಯ ನೀಡಲಾಗುವುದು ಎಂದು ಹೇಳಿದ್ದರೂ, ಮಂಗಳವಾರ ಹಿಂದಿನ ಸ್ಥಿತಿಯೇ ಮುಂದುವರಿದಿದ್ದು, ಮನೆಯಿಂದ ಮಹಿಳೆಯರು ಹೊರಗೆ ಬರುವಂತಿಲ್ಲ ಎಂದು ಆದೇಶಿಸಲಾಗಿತ್ತು. ಇದಕ್ಕೆ ಮುಖ್ಯ ಕಾರಣ ಏನೆಂದರೆ, ಮಹಿಳೆಯರು ಹೊರಗೆ ಓಡಾಡಿದರೆ ಅವರನ್ನು ಶಿಕ್ಷಿಸಬೇಕು ಎನ್ನುವ ಟ್ರೈನಿಂಗ್ ನ್ನು ಉಗ್ರರಿಗೆ ನೀಡಲಾಗಿದೆ. ತಾಲಿಬಾನಿಗರು ಮಹಿಳೆಯರಿಗೆ ಸ್ವಾತಂತ್ರ್ಯ ನೀಡುತ್ತೇವೆ ಎಂದು ಹೇಳಿರುವ ವಿಚಾರ ಉಗ್ರರಿಗೆ ಇನ್ನೂ ತಿಳಿದಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಮನೆಯಿಂದ ಹೊರಗೆ ಬರುವ ಮಹಿಳೆಯರನ್ನು ಉಗ್ರರು ಶಿಕ್ಷಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲಿಬಾನ್ ನಾಯಕರು ಮತ್ತೊಂದು ಹೇಳಿಕೆ ನೀಡಿದ್ದು, ಮಹಿಳೆಯರು ತಾತ್ಕಾಲಿಕವಾಗಿ ಮನೆಯಲ್ಲಿಯೇ ಇರಿ ಎಂದು ಹೇಳಿದೆ.

ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಈ ನಡೆಯ ಬಗ್ಗೆ  ವಿವರಿಸಿರುವ ಪ್ರಕಾರ, ನಾವು ಮಹಿಳೆಯರನ್ನು ರಕ್ಷಿಸುವ ಉದ್ದೇಶ ಹೊಂದಿದ್ದೇವೆ. ಆದರೆ, ಹೊಸದಾಗಿ ಸೇರ್ಪಡೆಯಾಗಿರುವ ಮತ್ತು ಇನ್ನೂ ಚೆನ್ನಾಗಿ ತರಬೇತಿಯನ್ನು ಪಡೆಯದ ನಮ್ಮ ಪಡೆಗಳು ಮಹಿಳೆಯರನ್ನು ದುರುಪಯೋಗ ಪಡಿಸಿಕೊಳ್ಳಬಹುದೆಂದು ನಾವು ಚಿಂತೆಗೊಳಗಾಗಿದ್ದೇವೆ. ನಮ್ಮ ಪಡೆಗಳಿಂದ ಕೆಟ್ಟದ್ದು ಸಂಭವಿಸುವುದು, ಮಹಿಳೆಯರಿಗೆ ಹಾನಿ ಮಾಡುವುದು ಅಥವಾ ಕಿರುಕುಳ ನೀಡುವುದನ್ನು ನಾವು ಬಯಸುವುದಿಲ್ಲ ಎಂದು ಹೇಳಿದ್ದಾನೆ.

ನಾವು ಹೊಸ ನಿಯಮಗಳನ್ನು ಜಾರಿ ಮಾಡುವವರೆಗೂ’ ಮಹಿಳೆಯರು ಮನೆಯಲ್ಲಿಯೇ ಇರಬೇಕು ಮತ್ತು ‘ಅವರ ಸಂಬಳವನ್ನು ಅವರ ಮನೆಗಳಲ್ಲಿಯೇ ಪಾವತಿಸಲಾಗುವುದು’ ಎಂದು ಮುಜಾಹಿದ್ ತಿಳಿಸಿದ್ದಾನೆ. ಜೊತೆಗೆ ಉದ್ಯೋಗಸ್ಥ ಮಹಿಳೆಯರು ಹಿಜಾಬ್ ಧರಿಸಿದ್ದರಷ್ಟೇ ನಮ್ಮಿಂದ ಅವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾನೆ.

ಇನ್ನಷ್ಟು ಸುದ್ದಿಗಳು…

 

ತಮಿಳುನಾಡು ಬಿಜೆಪಿ ನಾಯಕನ ಅಶ್ಲೀಲ ವಿಡಿಯೋ ಯೂಟ್ಯೂಬ್ ನಲ್ಲಿ ವೈರಲ್

“ನನ್ನನ್ನು ಮದುವೆಗೆ ಯಾಕೆ ಕರೆದಿಲ್ಲ” ಎಂದು ಪ್ರಶ್ನಿಸಿ ನವವಿವಾಹಿತನಿಗೆ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕ!

ಎನ್. ಮಹೇಶ್ ಹಿಂದೂ ಧರ್ಮಕ್ಕೆ ಬೈದು ಶಾಸಕರಾದವರು! | ಎನ್.ಮಹೇಶ್ ವಿರುದ್ಧ ಅಪಸ್ವರ ಎತ್ತಿದ ಬಿಜೆಪಿ ಶಾಸಕ

ತೆನೆ ಇಳಿಸಿ, ಕೈ ಹಿಡಿಯುತ್ತಾರಾ ಜಿ.ಟಿ.ದೇವೇಗೌಡ? | ಅವಮಾನಗಳಿಂದ ಬೇಸತ್ತು ಜೆಡಿಎಸ್ ಬಿಡಲು ತೀರ್ಮಾನ!

ಈ ಬಾರಿ ಆನ್ ಲೈನ್ ನಲ್ಲೇ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ: ಸಚಿವ ಬಿ.ಶ್ರೀರಾಮುಲು

ಕೇಂದ್ರ ಸಚಿವ ನಾರಾಯಣರಾಣೆ ಅರೆಸ್ಟ್: ರಣರಂಗವಾದ ಮುಂಬೈ | ಶಿವಸೇನೆ, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

ರವಿಚಂದ್ರನ್ ಅವರ “ಯಮ್ಮೊ ಯಮ್ಮೋ  ನೋಡ್ಬಾರ್ದನ್ನು ನಾ ನೋಡ್ಡೆ” ಅನ್ನೋ ಹಾಡು ಇಷ್ಟ ಎಂದ ನಟಿ ನವ್ಯಾ

ಹಾವಿನ ಬಾಲಕ್ಕೆ ರಾಕಿ ಕಟ್ಟಲು ಹೋದಾತನಿಗೆ ಸಾವನ್ನೇ ಉಡುಗೊರೆ ನೀಡಿದ ಹಾವು! | ವಿಡಿಯೋ ನೋಡಿ…

ಇತ್ತೀಚಿನ ಸುದ್ದಿ

Exit mobile version