ತಮಿಳುನಾಡು ಬಿಜೆಪಿ ನಾಯಕನ ಅಶ್ಲೀಲ ವಿಡಿಯೋ ಯೂಟ್ಯೂಬ್ ನಲ್ಲಿ ವೈರಲ್

k t raghavan
24/08/2021

ಚೆನ್ನೈ: ಪಕ್ಷದ ಕಾರ್ಯಕರ್ತೆಯರೊಂದಿಗೆ ಅಶ್ಲೀಲ ಸಂಭಾಷಣೆ ನಡೆಸಿರುವ ಬಗ್ಗೆ ಆಡಿಯೋ ವೈರಲ್ ಆದ ಬಳಿಕ  ತಮಿಳುನಾಡು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಘವನ್ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದರಿಂದಾಗಿ ತಮಿಳುನಾಡು ಬಿಜೆಪಿ ಮತ್ತೆ ದುರ್ಬಲವಾಗಿದೆ.

ವರದಿಗಳ ಪ್ರಕಾರ, ತಮಿಳುನಾಡು ಬಿಜೆಪಿಗೆ ಕಳೆದ ವರ್ಷವಷ್ಟೇ ಸೇರ್ಪಡೆಗೊಂಡಿರುವ ಯೂಟ್ಯೂಬರ್ ರವಿಚಂದ್ರನ್ ಎಂಬವರು ತನ್ನದೇ ಪಕ್ಷದ ಪ್ರಧಾನ ಕಾರ್ಯದರ್ಶಿಯ ಕಾಮಕಾಂಡಗಳನ್ನು ಬಯಲಿಗೆಳೆದಿದ್ದು,  ಮಂಗಳವಾರ ಬೆಳಗ್ಗೆ ಆಡಿಯೋ ರೆಕಾರ್ಡ್ ಆಗಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಬಿಜೆಪಿ ಮುಖಂಡ ಕೆ.ಟಿ.ರಾಘವನ್ ಅವರದ್ದು ಎನ್ನಲಾಗಿರುವ ಧ್ವನಿ ಮಹಿಳೆಯರೊಂದಿಗೆ ಲೈಂಗಿಕ ಸಂಭಾಷಣೆಯಲ್ಲಿ ತೊಡಗಿರುವುದು ಕೇಳಿ ಬಂದಿದೆ ಎಂದು ಹೇಳಲಾಗಿದೆ.

ಇನ್ನೂ ಈ ಬಗ್ಗೆ ಮಾತನಾಡಿರುವ ರವಿಚಂದ್ರನ್, ಈ ವಿಡಿಯೋದೊಂದಿಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ನಾನು ಸಂಪರ್ಕಿಸಿದ್ದು, ಮಹಿಳೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ವಿಡಿಯೋ ಬಿಡುಗಡೆ ಮಾಡುವಂತೆ ಅವರು ತಿಳಿಸಿದರು ಎಂದು ಹೇಳಿದ್ದಾರೆ.

ವಿಡಿಯೋ ಬಿಡುಗಡೆಯ ಬೆನ್ನಲ್ಲೇ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ತನ್ನ ರಾಜೀನಾಮೆಯನ್ನು ಪ್ರಕಟಿಸಿರುವ ರಾಘವನ್, ನಾನು ಕಳೆದ 30 ವರ್ಷಗಳಿಂದ ಬಿಜೆಪಿಯಲ್ಲಿ ಯಾವುದೇ ಪ್ರಯೋಜನಗಳನ್ನು ಪಡೆಯದೇ ಕೆಲಸ ಮಾಡುತ್ತಿದ್ದೇನೆ. ನನ್ನ ಮೇಲೆ ಬಂದಿರುವ ಆರೋಪವನ್ನು ನಾನು ನಿರಾಕರಿಸುತ್ತೇನೆ. ಹಾಗೆಯೇ ಅದನ್ನು ಕಾನೂನು ಬದ್ಧವಾಗಿ ಎದುರಿಸುತ್ತೇನೆ ಎಂದು ಹೇಳಿದ್ದಾರೆ.

ತಮ್ಮದೇ ಪಕ್ಷದ ಮಹಿಳಾ ಕಾರ್ಯಕರ್ತೆಯೊಂದಿಗೆ  ರಾಘವನ್ ಅನುಚಿತವಾಗಿ ವರ್ತಿಸಿರುವುದಲ್ಲದೇ ಅಶ್ಲೀಲವಾಗಿ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಭಾಷಣೆಯು ಸದ್ಯ ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ. ಇನ್ನೂ ರವಿಚಂದ್ರನ್ ಹೇಳುತ್ತಿರುವಂತೆ ಆತನ ಬಳಿಯನ್ನು ಇನ್ನೂ 15 ನಾಯಕರ ವಿಡಿಯೋಗಳು ಇವೆ ಎಂದು ಹೇಳಿದ್ದಾನೆ.

YouTube video player

ಇನ್ನಷ್ಟು ಸುದ್ದಿಗಳು…

ಎನ್. ಮಹೇಶ್ ಹಿಂದೂ ಧರ್ಮಕ್ಕೆ ಬೈದು ಶಾಸಕರಾದವರು! | ಎನ್.ಮಹೇಶ್ ವಿರುದ್ಧ ಅಪಸ್ವರ ಎತ್ತಿದ ಬಿಜೆಪಿ ಶಾಸಕ

ತೆನೆ ಇಳಿಸಿ, ಕೈ ಹಿಡಿಯುತ್ತಾರಾ ಜಿ.ಟಿ.ದೇವೇಗೌಡ? | ಅವಮಾನಗಳಿಂದ ಬೇಸತ್ತು ಜೆಡಿಎಸ್ ಬಿಡಲು ತೀರ್ಮಾನ!

“ನನ್ನನ್ನು ಮದುವೆಗೆ ಯಾಕೆ ಕರೆದಿಲ್ಲ” ಎಂದು ಪ್ರಶ್ನಿಸಿ ನವವಿವಾಹಿತನಿಗೆ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕ!

ಮೊಮ್ಮಗಳಿಗೆ ಮೇಕೆ ಗುದ್ದಿದ್ದನ್ನು ಪ್ರಶ್ನೆ ಮಾಡಲು ಹೋದ ವೃದ್ಧ ದಾರುಣ ಸಾವು!

ಕೇಂದ್ರ ಸಚಿವ ನಾರಾಯಣರಾಣೆ ಅರೆಸ್ಟ್: ರಣರಂಗವಾದ ಮುಂಬೈ | ಶಿವಸೇನೆ, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ

ಬಾರ್ ಮುಂದೆ ವೀರವನಿತೆಯರ ಪಡೆ ಕಂಡು ಬೆಚ್ಚಿಬಿದ್ದ ಕುಡುಕರು | ಮುಂದೆ ನಡೆದದ್ದೇನು ಗೊತ್ತಾ?

ವಿಡಿಯೋ ಮುಂದಿಟ್ಟುಕೊಂಡು ಬಿಜೆಪಿ ಮುಖಂಡ ಚಿ.ನಾ.ರಾಮು ವಿರುದ್ಧ ಮಹಿಳೆಯಿಂದ ಬ್ಲ್ಯಾಕ್ ಮೇಲ್ | ದೂರು ದಾಖಲು

ಇತ್ತೀಚಿನ ಸುದ್ದಿ

Exit mobile version