ಮಂಗಳೂರಲ್ಲಿ ತುರ್ತು ಕಾಮಗಾರಿಗೆ 12 ಕೋಟಿ ರಿಲೀಸ್ ಮಾಡಲಾಗಿದೆ: ಸಚಿವ ಸಿ.ಸಿ.ಪಾಟೀಲ್

cc patil
27/08/2022

ಮಂಗಳೂರು: ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.  ಮಳೆ ಹಿನ್ನೆಲೆಯಲ್ಲಿ ಮಂಗಳೂರಲ್ಲಿ ತುರ್ತು ಕಾಮಗಾರಿಗೆ 12 ಕೋಟಿ ರಿಲೀಸ್ ಮಾಡಲಾಗಿದೆ ಎಂದು  ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಮಳೆ ಹಾನಿ‌ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೀನಿ. ಪ್ರಾಕೃತಿಕವಾಗಿ ರಿಪೇರಿ ಮಾಡಲು ಅನುದಾನ ಕೊಡಲಾಗುತ್ತದೆ. ಶಾಶ್ವತ ಪರಿಹಾರಕ್ಕೆ ಮಳೆಗಾಲ ಮುಗಿದ ನಂತರ ಪರಿಹಾರ ಬಿಡುಗಡೆ ಮಾಡಲಾಗುವುದು. ಉಡುಪಿ, ಮಂಗಳೂರು ಸೇರಿದಂತೆ ಈವರೆಗೆ 20 ಕೋಟಿಯಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ  ಎಂದು ತಿಳಿಸಿದರು.

ಕೆಂಪಣ್ಣನ ಆರೋಪದ ಬಗ್ಗೆ ಮಾಧ್ಯಮಗಳಿಗೆ ನಿನ್ನೆ ಪ್ರತಿಕ್ರಿಯಿಸಿದ್ದೀನಿ. 40% ಕಮಿಷನ್ ಆರೋಪ ಮಾಡಿರೋ ಕೆಂಪಣ್ಣ ಕಾಂಗ್ರೆಸ್ ‌ನವರಿಂದ ಎಷ್ಟು ಕಮಿಷನ್ ಪಡೆದಿದ್ದಾನೆ ಎಂದು ಹೇಳಲಿ ಎಂದು ಇದೇ ವೇಳೆ ಅವರು ಆಕ್ರೋಶ ವ್ಯಕ್ತಪಡಿಸಿದರು.

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version