7:20 AM Saturday 12 - September 2026

ಮಾತುಬಾರದ, ಕಿವಿ ಕೇಳದ ಮಹಿಳೆಯ ಮೇಲೆ ಆಸ್ಪತ್ರೆಯಲ್ಲೇ ಅತ್ಯಾಚಾರ!

crime news
10/08/2021

ಮೀರತ್:  ಮಾತುಬಾರದ ಮತ್ತು ಕಿವಿ ಕೇಳದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವ ಹೇಯ ಕೃತ್ಯ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದ್ದು, ಆಸ್ಪತ್ರೆಯ ನೈರ್ಮಲ್ಯ ಕೆಲಸಗಾರ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ.

ಮಾನಸಿಕ  ಅಸ್ವಸ್ಥೆಯಾಗಿದ್ದರಿಂದ 2017ರಿಂದ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಳು ಎನ್ನಲಾಗಿದೆ.  ಗುರುವಾರ ನೈರ್ಮಲ್ಯ ಕೆಲಸಕ್ಕೆಂದು ಬಂದಿದ್ದ ಆರೋಪಿಯು ಮಾತು ಬಾರದ ಮತ್ತು ಕಿವಿ ಕೇಳದ ಮಾನಸಿಕ ಅಸ್ವಸ್ಥೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಹೇಳಲಾಗಿದೆ.

ಇನ್ನೂ ಘಟನೆಯ ಮಾಹಿತಿ ತಿಳಿದು ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದು, ಈ ವೇಳೆ ಹಲವು ಮಾನಸಿಕ ಅಸ್ವಸ್ಥ ಮಹಿಳೆಯರು ಲೈಂಗಿಕ ಕಿರುಕುಳಕ್ಕೊಳಗಾಗಿರುವುದು ತಿಳಿದು ಬಂದಿದೆ ಎಂದು ಹೇಳಲಾಗಿದೆ.  ಆರೋಪಿಯು ಹೊರ ಗುತ್ತಿಗೆ ಸಂಸ್ಥೆಯಿಂದ ನಿಯೋಜನೆಗೊಂಡ ನೌಕರನಾಗಿದ್ದ ಆರೋಪಿಯನ್ನು ಘಟನೆಯ ಬಳಿಕ ವಜಾಗೊಳಿಸಿ, ಪೊಲೀಸರಿಗೆ ಒಪ್ಪಿಸಲಾಗಿದೆ.

ಮಹಿಳಾ ರೋಗಿಗಳ ಘಟಕಕ್ಕೆ ಪುರುಷನನ್ನು ಸ್ವಚ್ಛತಾ ಕಾರ್ಯಕ್ಕೆ ಹೇಗೆ ನೇಮಿಸಿದರು ಎನ್ನುವುದು ತಿಳಿದು ಬಂದಿಲ್ಲ. ಈ ಘಟನೆಯಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯ ಕೂಡ ನೇರವಾಗಿ ಕಂಡು ಬಂದಿದೆ. ಈ ಬಗ್ಗೆ ಯಾರು ಕ್ರಮಕೈಗೊಳ್ಳುತ್ತಾರೆ ಎನ್ನುವುದು ತಿಳಿದು ಬಂದಿಲ್ಲ.

ಇನ್ನಷ್ಟು ಸುದ್ದಿಗಳು…

ಕಾಂಗ್ರೆಸ್ ನವರು ಕುಡುಕ ಸೂ*** ಮಕ್ಕಳು ಎಂದು ಹೇಳಿಕೆ ನೀಡಿದ ಸಚಿವ ಈಶ್ವರಪ್ಪ

ದೇವಸ್ಥಾನದಿಂದ ಬರುತ್ತಿದ್ದ ಮಹಿಳೆಯನ್ನು ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ!

ಮೊಘಲರ ಆಳ್ವಿಕೆಯ 600 ವರ್ಷಗಳ ಕಾಲ ಪ್ರಮುಖ ಹುದ್ದೆ ಅಲಂಕರಿಸಿದ್ದವರು ಬ್ರಾಹ್ಮಣರು | ಸಿದ್ದರಾಮಯ್ಯ

ಎಟಿಎಂ ಒಡೆಯುತ್ತಿದ್ದ ವೇಳೆ ಎಟಿಎಂನಲ್ಲಿ ಸಿಕ್ಕಿಹಾಕಿಕೊಂಡ ಕಳ್ಳ! | ಮುಂದೆ ನಡೆದದ್ದೇನು ಗೊತ್ತಾ?

ಬಿಜೆಪಿಯಲ್ಲಿ ಅತೃಪ್ತಿಯ ಉರಿ: ದೆಹಲಿಯಲ್ಲಿ ಬೀಡು ಬಿಟ್ಟ ರಮೇಶ್ ಜಾರಕಿಹೊಳಿ ತಂಡ

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler
Exit mobile version