ಸೋದರಳಿಯ ಆಕಾಶ್ ಆನಂದ್ ನ್ನು ಮತ್ತೆ ಉತ್ತರಾಧಿಕಾರಿಯಾಗಿ ನೇಮಿಸಿಕೊಂಡ ಮಾಯಾವತಿ

mayawati
23/06/2024

ಲಕ್ನೋ:  ಲೋಕಸಭಾ ಚುನಾವಣೆ—2024ನಲ್ಲಿ ಹೀನಾಯ ಸೋಲಿನ ಬಳಿಕ  ಇದೀಗ  ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಮತ್ತೆ ಉತ್ತರಾಧಿಕಾರಿಯಾಗಿ ನೇಮಿಸಿಕೊಂಡಿದ್ದು, ಪಕ್ಷದ ರಾಷ್ಟ್ರೀಯ ಸಂಯೋಜಕರಾಗಿ ಮರುನೇಮಕ ಮಾಡಿದ್ದಾರೆ.

ಮೇ ತಿಂಗಳ ಆರಂಭದಲ್ಲಿ ಅವರ ಸೋದರಳಿಯ ಆಕಾಶ್ ಆನಂದ್ ಅವರನ್ನು ಬಿಎಸ್‌ ಪಿಯ ರಾಷ್ಟ್ರೀಯ ಸಂಯೋಜಕ ಮತ್ತು ಅವರ ಉತ್ತರಾಧಿಕಾರಿ ಹುದ್ದೆಯಿಂದ ತೆಗೆದುಹಾಕಿದ್ದರು.

ಆಕಾಶ್​ ಇನ್ನೂ ಅಪ್ರಬುದ್ಧ ಎಂದು ಆ ಸಮಯದಲ್ಲಿ ಮಾಯಾವತಿ ಹೇಳಿದ್ದರು.   ಇದೀಗ  ಮಹತ್ವದ ಬದಲಾವಣೆಯಲ್ಲಿ ಮತ್ತೆ ಆಕಾಶ್ ​ಗೆ ಮಾಯಾವತಿ ಅವರು ಪಟ್ಟ ಕಟ್ಟಿದ್ದಾರೆ.

ಆಕಾಶ್ ಆನಂದ್ 2017 ರಲ್ಲಿ ತಮ್ಮ 22 ನೇ ವಯಸ್ಸಿನಲ್ಲಿ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. ಅವರು ಲಂಡನ್‌ ನಲ್ಲಿ MBA ಪದವಿಯನ್ನು ಮಾಡಿದ್ದಾರೆ. ಜೂನ್ 2019 ರಲ್ಲಿ, ಬಿಎಸ್ಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ, ಆನಂದ್ ಪಕ್ಷದ ರಾಷ್ಟ್ರೀಯ ಸಂಯೋಜಕನ ಪಾತ್ರವನ್ನು ವಹಿಸಿಕೊಂಡರು. 29 ವರ್ಷದ ಅವರನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಾಯಾವತಿ ಅವರ ರಾಜಕೀಯ ಉತ್ತರಾಧಿಕಾರಿಯಾಗಿ ನೇಮಿಸಲಾಯಿತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version