4:41 AM Saturday 24 - January 2026

ಚಿರು ಜೊತೆಗಿನ ತಮ್ಮ ಪ್ರೀತಿಯ ಫೋಟೋ ಹಂಚಿಕೊಂಡ ಮೇಘನಾ

01/12/2020

ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಕನಸಿನ ಚಿತ್ರಗಳು ಸದ್ಯ ವೈರಲ್ ಆಗಿದ್ದು, ಐಫೆಲ್ ಟವರ್, ಲೀನಿಂಗ್ ಟವರ್ ಆಫ್ ಪಿಸಾ ಮತ್ತು ಇತರ ದೇಶಗಳ ಅಪ್ರತಿಮ ಸ್ಮಾರಕಗಳ ಮುಂದೆ ತೆಗೆದುಕೊಂಡ ಫೋಟೋಗಳನ್ನು ಮೇಘನಾ ಶೇರ್ ಮಾಡಿಕೊಂಡಿದ್ದಾರೆ.

ದಕ್ಷಿಣ ಭಾರತದ ಅತ್ಯಂತ ಭಾವನಾತ್ಮಕ ಜೋಡಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರು ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜೂನ್ 7ರಂದು ಏಕಾಏಕಿ ಜಿರಂಜೀವಿ ಸರ್ಜಾ ಅವರು ಹೃದಯಾಘಾತದಿಂದ ನಿಧನರಾದಾಗ ಇಡೀ ದಕ್ಷಿಣ ಭಾರತದ ಚಿತ್ರರಂಗವೇ ಕಣ್ಣೀರಿಟ್ಟಿತ್ತು. ಚಿರು ನಿಧನರಾದಾಗ ಮೇಘನಾ 5 ತಿಂಗಳ ಗರ್ಭಿಣಿಯಾಗಿದ್ದರು.

ಏಪ್ರಿಲ್ 15ರಂದು ಮೇಘನಾ ಮತ್ತು ಚಿರಂಜೀವಿ ಇಟೆಲಿಯ ಪಿಸಾದ ಲೀನಿಂಗ್ ಟವರ್ ಗೆ ಭೇಟಿ ನೀಡಿದ್ದರು. ಇಬ್ಬರು ಕೂಡ ಸ್ಮಾರಕದ ಬಳಿಯಲ್ಲಿ ಚಿತ್ರಕ್ಕೆ ಪೋಸ್ ನೀಡಿದ್ದರು. ಈ ಚಿತ್ರ ಇದೀಗ ಜನರ ಗಮನ ಸೆಳೆದಿದೆ.


ಇತ್ತೀಚಿನ ಸುದ್ದಿ

Exit mobile version