ಇದ್ದಕ್ಕಿದ್ದಂತೆ ಫೇಸ್ ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ಯಾಕೆ..?

05/03/2024

ಫೇಸ್ ಬುಕ್, ಇನ್ಸ್ಟಾಗ್ರಾಮ್ ಬಳಕೆದಾರರು ಮೆಟಾ-ಮಾಲೀಕತ್ವದ ಪ್ಲಾಟ್ ಫಾರ್ಮ್‌ಗಳೊಂದಿಗೆ ಪ್ರವೇಶಿಸಲು ಸಂಜೆಯಿಂದ ತೊಂದರೆಗಳನ್ನು ಎದುರಿಸಿದ ಘಟನೆ ನಡೆದಿದೆ. ಮಂಗಳವಾರ ಸಂಜೆಯಿಂದ ಲಾಗಿನ್ ಮತ್ತು ತಾಜಾ ಫೀಡ್ ಗಳಲ್ಲಿ ಸಮಸ್ಯೆಗಳನ್ನು ಕಾಣಿಸಿತು.

ಫೇಸ್ಬುಕ್, ಮೆಸೆಂಜರ್ ಮತ್ತು ಥ್ರೆಡ್ಸ್ ಸೇರಿದಂತೆ ಮೆಟಾದ ಪ್ಲಾಟ್ಫಾರ್ಮ್‌ಗಳ ಕಾರ್ಯಾಚರಣೆ ಸ್ಥಗಿತದಿಂದ ವ್ಯತಿರಿಕ್ತ ಪರಿಣಾಮ ಬೀರಿತು. ಈ ಪ್ಲಾಟ್ ಫಾರ್ಮ್ ಗಳನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವ ಬಳಕೆದಾರರನ್ನು ದೋಷ ಸಂದೇಶಗಳೊಂದಿಗೆ ಸ್ವಾಗತಿಸಿತು. ಲಾಗ್ ಇನ್ ಮಾಡಲು ಅಥವಾ ಅವರ ಫೀಡ್ ಗಳನ್ನು ನೋಡಲು ಸಾಧ್ಯವಾಗಲಿಲ್ಲ.

ಫೇಸ್ ಬುಕ್‌ನಲ್ಲಿ, ಬಳಕೆದಾರರಿಗೆ “ಸೆಷನ್ ಅವಧಿ ಮೀರಿದ” ಸಂದೇಶ ಕಾಣಿಸಿಕೊಂಡಿದೆ. ಇದನ್ನು ನೋಡಿದ ಅನೇಕರು ಮತ್ತೆ ಲಾಗ್ ಇನ್ ಮಾಡಲು ಪ್ರಯತ್ನಪಟ್ಟರು. ಆದರೆ ಲಾಗ್ ಇನ್ ಮಾಡುವ ಪ್ರಯತ್ನಗಳ‌ ಮಧ್ಯೆ “ಲಾಗ್ ಇನ್ ಮಾಡಲು ಅಸಮರ್ಥ” ಎಂಬ ದೋಷದ ‌ಮೆಸೇಜ್ ಬರತೊಡಗಿದವು. ಅತ್ತ ಇನ್ಸ್ಟಾಗ್ರಾಮ್ ಬಳಕೆದಾರರು ಕೂಡಾ ತಮ್ಮ ಫೀಡ್ ಗಳನ್ನು ನೋಡುವಲ್ಲಿ ಸವಾಲುಗಳನ್ನು ಎದುರಿಸಿದ ಘಟನೆ ನಡೆದಿದೆ.

ಸ್ಥಗಿತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಕುರಿತು ಮೆಟಾ ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಇದು ಸರ್ವರ್ ಸಮಸ್ಯೆಯನ್ನು ಸೂಚಿಸುತ್ತದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version