ಕುಕ್ಕರ್ ನಲ್ಲಿ ಶವ ಕೇಸ್: ತಾನು ಎಚ್ಐವಿ ಪೀಡಿತ: ಮೃತ ಯುವತಿ ಜೊತೆಗೆ ದೈಹಿಕ ಸಂಬಂಧವೇ ಹೊಂದಿರಲಿಲ್ಲ ಎಂದ ಕ್ರಿಮಿನಲ್..!

09/06/2023

ಸರಸ್ವತಿ ವೈದ್ಯ ಎಂಬ ಯುವತಿಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ಛಿದ್ರಗೊಳಿಸಿದ ಆರೋಪ ಹೊತ್ತಿರುವ ಮನೋಜ್ ಸಾನೆ ತಾನು ಎಚ್ಐವಿ ಪಾಸಿಟಿವ್ ಮತ್ತು ಸಂತ್ರಸ್ತೆಯೊಂದಿಗೆ ತಾನು ಯಾವುದೇ ದೈಹಿಕ ಸಂಬಂಧ ಹೊಂದಿರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಮುಂಬೈ ಬಳಿಯ ಮೀರಾ ರಸ್ತೆಯಲ್ಲಿರುವ ನಿವಾಸದಲ್ಲಿ ಸರಸ್ವತಿಯ ಕೊಳೆತ ದೇಹವನ್ನು ಪೊಲೀಸರು ಪತ್ತೆ ಹಚ್ಚಿದ ನಂತರ ಸಾನೆಯನ್ನು ಬಂಧಿಸಲಾಗಿತ್ತು.

ಸರಸ್ವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಾನೆ ಈ ಹಿಂದೆ ಹೇಳಿಕೊಂಡಿದ್ದ. ಇದರಿಂದ್ದ ತಾನು ಭಯಭೀತನಾಗಿದ್ದೆ. ಅಲ್ಲದೇ ಈ ಪ್ರಕರಣದಲ್ಲಿ ಪೊಲೀಸರು ತನ್ನನ್ನು ಸಿಲುಕಿಸುತ್ತಾರೆ ಎಂದು ಭಾವಿಸಿ ಶವವನ್ನು ಕತ್ತರಿಸಿ ಪ್ರೆಶರ್ ಕುಕ್ಕರ್ ನಲ್ಲಿ ಕುದಿಸಿ ವಿಲೇವಾರಿ ಮಾಡಿದ್ದೆ ಎಂದು ಹೇಳಿದ್ದ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸ್ ಅಧಿಕಾರಿಗಳು, ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ಆರೋಪಿ ತುಂಬಾ ಬುದ್ಧಿವಂತ. ಆತ ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ತಿಳಿಸಿದ್ದಾರೆ.

ಇಂಡಿಯಾ ಟುಡೇ ಜೊತೆ ಮಾತನಾಡಿದ ಪೊಲೀಸ್ ಅಧಿಕಾರಿಯೊಬ್ಬರು, ‘ಅವರ ಹೇಳಿಕೆಯಲ್ಲಿ ಯಾವುದೇ ಸತ್ಯ ಇಲ್ಲ. ಅಂತಹ ಹೇಳಿಕೆಗಳನ್ನು ನೀಡುವ ಮೂಲಕ ತನಿಖೆಯನ್ನು ತಪ್ಪುದಾರಿಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಅವನು ಎಚ್ಐವಿ-ಪಾಸಿಟಿವ್ ಆಗಿದ್ದರೂ ಸಹ, ಅದು ಪ್ರಕರಣ ಅಥವಾ ತನಿಖೆಯ ಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂದರೆ ಅದು ನಮಗೆ ಮುಖ್ಯವಲ್ಲ. ಅದಕ್ಕೆ ಸಂಬಂಧವಿಲ್ಲದ ಅಪರಾಧವನ್ನು ಅವನು ಮಾಡಿದ್ದಾನೆ.

ಆದರೂ ನಾವು ಅವನ ಎಚ್ಐವಿ ಪರೀಕ್ಷೆಯನ್ನು ನಡೆಸುತ್ತೇವೆ. ಫಲಿತಾಂಶ ಏನೇ ಇರಲಿ, ಇದು ಪ್ರಕರಣದ ಮೇಲೆ ಪರಿಣಾಮ ಬೀರುವುದಿಲ್ಲ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version