5:14 PM Thursday 23 - October 2025

ಕ್ಷಿಪಣಿ ದಾಳಿಗಳು, ಬೀದಿಗಳಲ್ಲಿ ಬಂದೂಕುಧಾರಿಗಳ ಅಟ್ಟಹಾಸ; ಇಸ್ರೇಲ್ ಮೇಲಿನ ಹಮಾಸ್ ದಾಳಿ 300ಕ್ಕೂ ಹೆಚ್ಚು ಮಂದಿ ಸಾವು

08/10/2023

ಫೆಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್ ಶನಿವಾರ ಬೆಳಿಗ್ಗೆಯಿಂದ ಪ್ರಾರಂಭಿಸಿದ ದಾಳಿಯಲ್ಲಿ ಇಸ್ರೇಲ್ ನಲ್ಲಿ ಕನಿಷ್ಠ 300 ಮಂದಿ ಸಾವನ್ನಪ್ಪಿದ್ದಾರೆ. ಪ್ರತೀಕಾರದ ಮಿಲಿಟರಿ ಕಾರ್ಯಾಚರಣೆ, ಆಪರೇಷನ್ ಐರನ್ ಸ್ವೋರ್ಡ್ಸ್ ಮೂಲಕ ಇಸ್ರೇಲ್ ರಕ್ಷಣಾ ಪಡೆ ಪ್ರತಿದಾಳಿಯನ್ನು ಆರಂಭಿಸಿತು. ಇದೇ ವೇಳೆ ಗಾಜಾ ಮತ್ತು ವೆಸ್ಟ್ ಬ್ಯಾಂಕ್‌ನಲ್ಲಿ 230 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿತು.
ದಕ್ಷಿಣ ಇಸ್ರೇಲ್ ನಲ್ಲಿ ಇಸ್ರೇಲ್ ಸೇನೆ ಮತ್ತು ಹಮಾಸ್ ಉಗ್ರರ ನಡುವಿನ ತೀವ್ರ ಹೋರಾಟ ಇನ್ನೂ ಮುಂದುವರೆದಿದೆ.

ಇತ್ತೀಚಿನ ವರದಿಯ ಪ್ರಕಾರ, ಸ್ಡೆರೊಟ್ ಮತ್ತು ಕಿಬ್ಬುಟ್ಜ್ ನಿರ್ ಆಮ್ ನಂತಹ ಪ್ರದೇಶಗಳಲ್ಲಿ ರಾಕೆಟ್ ಸೈರನ್ ಗಳನ್ನು ಮೊಳಗಿಸಲಾಗಿದೆ. ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿಲ್ಲ ಎಂದು ಇಸ್ರೇಲ್ ಸೇನಾ ವಕ್ತಾರರು ತಿಳಿಸಿದ್ದಾರೆ. ಗಾಝಾದ ಮೇಲೆ ಇಸ್ರೇಲಿ ಬಾಂಬ್ ದಾಳಿ ಭಾನುವಾರ ಬೆಳಿಗ್ಗೆಯವರೆಗೂ ಮುಂದುವರಿಯಿತು. ದಶಕಗಳಲ್ಲಿ ಫೆಲೆಸ್ತೀನ್ ಉಗ್ರರು ನಡೆಸಿದ ಅತಿದೊಡ್ಡ ದಾಳಿಯಲ್ಲಿ ಇಸ್ರೇಲ್ ನಲ್ಲಿ 1,600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version