ಮನೆಯೊಂದರಲ್ಲಿ ಪತ್ತೆಯಾಯ್ತು 25ಕ್ಕೂ ಅಧಿಕ ಮಾನವ ತಲೆಬುರುಡೆಗಳು: ಬೆಚ್ಚಿಬಿದ್ದ ಗ್ರಾಮಸ್ಥರು

ramanagara news
11/03/2024

ರಾಮನಗರ: ಮನೆಯೊಂದರಲ್ಲಿ ಸುಮಾರು 25ಕ್ಕೂ ಅಧಿಕ ಮನುಷ್ಯ ತಲೆಬುರುಡೆಗಳು ಪತ್ತೆಯಾಗಿರುವ ಘಟನೆ ಬಿಡದಿ ಬಳಿಯ ಜೋಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಲರಾಮ್‌ ಎಂಬ ವ್ಯಕ್ತಿ ತಲೆಬುರುಡೆ ಸಂಗ್ರಹ ಮಾಡಿ ಮಾಟ ಮಂತ್ರ ಮಾಡುತ್ತಿರುವ ಬಗ್ಗೆ  ಗ್ರಾಮಸ್ಥರು ಆರೋಪಿಸಿದ್ದರು. ಈ ಮಾಹಿತಿಯನ್ವಯ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಬಲರಾಮನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸ್ಮಶಾನದಲ್ಲಿ ಬಲರಾಮ ತಲೆಬುರುಡೆಗಳಿಗೆ ಪೂಜೆ ಮಾಡಿದ್ದು, ಇದನ್ನು ಗಮನಿಸಿದ  ಗ್ರಾಮಸ್ಥರು ಆತಂಕದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರ ದೂರಿನನ್ವಯ ಬಿಡದಿ ಪೊಲೀಸರು ಸ್ಮಶಾನಕ್ಕೆ ಆಗಮಿಸಿದ್ದು, ಬಲರಾಮನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈತನ ಮನೆಯಲ್ಲಿ ಅನೇಕ ಮಾನವ ತಲೆಬುರುಡೆಗಳು ಪತ್ತೆಯಾಗಿವೆ.

ನನ್ನ ತಾತನ ಕಾಲದಿಂದಲೂ ಬುರುಡೆ ಪೂಜೆ ಮಾಡುತ್ತಿದ್ದೇವೆ ಎಂದು ಪೊಲೀಸರ ವಿಚಾರಣೆ ವೇಳೆ ಬಲರಾಮ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರು ಏನು ಕ್ರಮಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version