ಡಾರ್ಫರ್ ಪಟ್ಟಣದ ಮೇಲೆ ದಾಳಿ: 800 ಕ್ಕೂ ಹೆಚ್ಚು ಸುಡಾನ್ ಪ್ರಜೆಗಳ ಸಾವು

13/11/2023

ಯುದ್ಧ ಪೀಡಿತದಂತಿರುವ ಸುಡಾನ್‌ನ ದಾರ್ಫುರ್ ಪ್ರಾಂತ್ಯದಲ್ಲಿ ಅರೆಸೇನಾ ಪಡೆಯ ಯೋಧರು ಮತ್ತು ಅವರ ಮೈತ್ರಿಯ ಅರಬ್ ಸೇನೆ ನಡೆಸಿದ ದಾಳಿಯಲ್ಲಿ 800ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ವಿಶ್ವಸಂಸ್ಥೆ ಅಧಿಕಾರಿಗಳು, ಏಪ್ರಿಲ್ ಮಧ್ಯಂತರ ಅವಧಿ ವೇಳೆ ಸುಡಾನ್ ಸೇನೆಯ ಮುಖ್ಯಸ್ಥ ಜನರ್ ಅಬ್ದೆಲ್ ಫತಾ ಬುರ್ಹಾನ್ ಮತ್ತು ಅರೆಸೇನಾ ಪಡೆಗಳ ಮುಖ್ಯಸ್ಥ ಜನರಲ್ ಮೊಹಮ್ಮದ್ ಹಮ್ದಾನ್ ಡಗಾಲೊ ಮಧ್ಯೆ ನಡುವಿನ ಬಿಕ್ಕಟ್ಟಿನಿಂದಾಗಿ ಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಸೇನೆ ಮತ್ತು ಅರೆಸೇನಾ ನಡುವಿನ ಆಂತರಿಕ ಕಲಹದಲ್ಲಿ 800ಕ್ಕೂ ಹೆಚ್ಚು ಮಂದಿ ಹತ್ಯೆಯಾಗಿದ್ದಾರೆ ಎಂದು ಹೇಳಿದ್ದಾರೆ.

ಸಂಘರ್ಷದಿಂದ ಪ್ರಾಣ ಉಳಿಸಿಕೊಳ್ಳಲು 8,000ಕ್ಕೂ ಹೆಚ್ಚು ಜನರು ನೆರೆಯ ಚಾಡ್ ದೇಶಕ್ಕೆ ವಲಸೆ ಹೋಗಿದ್ದಾರೆ. 20 ವರ್ಷಗಳ ಹಿಂದೆ ದಾರ್ಫುರ್ ಪ್ರಾಂತ್ಯದಲ್ಲಿ ಉದ್ಭವಿಸಿದ್ದ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಶೋಷಣೆಗಳು ಇಡೀ ವಿಶ್ವವನ್ನೇ ಆಘಾತಗೊಳಿಸಿದ್ದವು. ಇದೀಗ ಮತ್ತೆ ಅಂತಹದ್ದೇ ದಿನಗಳು ಬರುತ್ತಿವೆ ಎಂದು ವಿಶ್ವಸಂಸ್ಥೆಯ ಹೈಕಮಿಷನರ್ (ನಿರಾಶ್ರಿತರ ವಿಭಾಗ) ಫಿಲಿಪ್ಪೊ ಗ್ರಾಂಡಿ ಆತಂಕ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version