ತಾಯಿ: ಹುಟ್ಟಲಿರುವ ಮಗುವಿಗಾಗಿ ದೀಪಿಕಾ ಪಡುಕೋಣೆಯಿಂದ ದಿಟ್ಟ ನಿರ್ಧಾರ!

deepika padukon
28/07/2024

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ  ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ವೇಳೆ ಹುಟ್ಟುವ ಮಗುವಿಗಾಗಿ ನಟಿ ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರಂತೆ!

ಸದ್ಯದ ವರದಿಗಳ ಪ್ರಕಾರ ದೀಪಿಕಾ ಅವರು ಹೊಸ ಪ್ರಾಜೆಕ್ಟ್ ಗಳಿಗೆ ಸಹಿ ಹಾಕುತ್ತಿಲ್ವಂತೆ,  ಇತ್ತೀಚೆಗೆ ದೀಪಿಕಾಗೆ ಅಂತರಾಷ್ಟ್ರೀಯ ವೆಬ್ ಸ್ಟೋರಿ ‘ದಿ ವೈಟ್ ಲೋಟಸ್’ ಮೂರನೇ ಸೀಸನ್ ಆಫರ್ ಸಿಕ್ಕಿತ್ತಂತೆ. ಆದರೆ ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗುವುದಿಲ್ಲ ಅಂತ ಈ ಪ್ರಾಜೆಕ್ಟ್ ನ್ನು ದೀಪಿಕಾ ಕೈಬಿಟ್ಟಿದ್ದಾರೆ ಎನ್ನಲಾಗಿದೆ.

ಮಗುವನ್ನು ಯಾರ ಸಹಾಯವೂ ಇಲ್ಲದೇ ತಾನೇ ನೋಡಿಕೊಳ್ಳಲು ದೀಪಿಕಾ ನಿರ್ಧರಿಸಿದ್ದಾರಂತೆ, ಹೆರಿಗೆಯ ನಂತರ ಮಗುವಿನ ಪಾಲನೆಯಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು, ಹಲವು ಅವಕಾಶಗಳನ್ನು ಅವರು ಬಿಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಎಲ್ಲ ಸೆಲೆಬ್ರೆಟಿಗಳು ತಮ್ಮ ಮಕ್ಕಳನ್ನು ನೋಡಲು ದಾದಿಯರನ್ನು ನೇಮಿಸಿ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ ದೀಪಿಕಾ ಇನ್ನು ಹುಟ್ಟಲಿರುವ ಮಗುವನ್ನು ನೋಡಿಕೊಳ್ಳಲು ತಾಯಿಯಾಗಿ ತನ್ನ ಜವಾಬ್ದಾರಿಯನ್ನು ಪೂರೈಸಲು ಮುಂದಾಗಿದ್ದು, ಈ ಮೂಲಕ ತಾಯ್ತನಕ್ಕೆ ಹೊಸ ಅರ್ಥವನ್ನು ನೀಡಿದ್ದಾರೆ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version