11:57 PM Wednesday 27 - August 2025

ಮಗಳಿಗೆ ವಾಟ್ಸಾಪ್ ಮೆಸೇಜ್ ಕಳುಹಿಸಿ ತಾಯಿ ಆತ್ಮಹತ್ಯೆ: ಸಂಶಯಾಸ್ಪದ ಸಾವು ಪ್ರಕರಣ ದಾಖಲು

udupi
08/04/2023

ಬ್ರಹ್ಮಾವರ: ಮಗಳಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿದೆ.

ಮೃತರನ್ನು ಚಾಂತಾರು ನಿವಾಸಿ ಆಶಾಲತಾ(62) ಎಂದು ಗುರುತಿಸಲಾಗಿದೆ. ಆಶಾಲತಾ ತನ್ನ ದತ್ತು ಪುತ್ರಿ ಶಮೀಕ್ಷಾಳೊಂದಿಗೆ ವಾಸವಾಗಿದ್ದರು.

ಮಗಳು ಮತ್ತು ತಾಯಿ ಮಧ್ಯೆ ಗಲಾಟೆ ನಡೆದಿದ್ದು, ಆಶಾಲತಾ ಯಾವುದೋ ವಿಚಾರಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಎ.7ರಂದು ಬೆಳಗ್ಗೆ 11.30ರ ಸುಮಾರಿಗೆ ತನ್ನ ಮಗಳಿಗೆ ತಾನು ಸಾಯುತ್ತೇನೆ ಎಂದು ವಾಟ್ಸಾಪ್ ಮೂಲಕ ಮೆಸೇಜ್ ಕಳುಹಿಸಿ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇವರ ಮರಣದಲ್ಲಿ ಸಂಶಯವಿರುವುದಾಗಿ ಮೃತರ ಸಹೋದರಿ ಜ್ಯೋತಿ ಪ್ರಭಾ ದೂರು ನೀಡಿದ್ದಾರೆ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EOUjVqy3Mmp66N4bRSBoht

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ

Exit mobile version