ಮದುವೆಗೆ 9 ದಿನಗಳು ಬಾಕಿ ಇರುವಾಗಲೇ ಭಾವಿ ಅಳಿಯನೊಂದಿಗೆ ಅತ್ತೆ ಪರಾರಿ!

up crime
09/04/2025

ಅಲಿಗಢ: ಮಗಳ ಮದುವೆಗೆ ಕೇವಲ 9 ದಿನ ಬಾಕಿ ಉಳಿದಿರುವ ವೇಳೆ ತಾಯಿ ತನ್ನ ಭಾವಿ ಅಳಿಯನ ಜೊತೆಗೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶ ಅಲಿಗಢದಲ್ಲಿ ನಡೆದಿದೆ.

ಭಾವಿ ಅಳಿಯನ ಮೇಲೆಯೇ ಅತ್ತೆ ಪ್ರೀತಿಯಲ್ಲಿ ಬಿದ್ದಿದ್ದಾಳೆ,  ಮದುವೆಗೂ ಮೊದಲು ಆ ಜೋಡಿ ಓಡಿ ಹೋಗಲು ನಿರ್ಧಾರ ಮಾಡಿತ್ತು. ಮಗಳ ಮದುವೆಗೆ ಮಾಡಿಸಿದ್ದ ಆಭರಣಗಳು ಹಾಗೂ ಹಣವನ್ನು ತೆಗೆದುಕೊಂಡು ತಾಯಿ ತನ್ನ ಭಾವಿ ಅಳಿಯನ ಜೊತೆಗೆ ಪರಾರಿಯಾಗಿದ್ದಾಳೆ.

ಮಹಿಳೆಯೇ ಮುಂದೆ ನಿಂತು ತನ್ನ ಮಗಳಿಗೆ ನಿಶ್ಚಿತಾರ್ಥ ನಡೆಸಿದ್ದಳು. ಹುಡುಗನನ್ನೂ ಆಕೆಯೇ ಹುಡುಕಿದ್ದಳು. ಮದುವೆ ಸಿದ್ಧತೆಯ ಹೆಸರಿನಲ್ಲಿ ಆಗಾಗ ಮನೆಗೆ ಬರುತ್ತಿದ್ದ ಭಾವಿ ಅಳಿಯನ ಜೊತೆಗೆ ಅತ್ತೆಗೆ ಪ್ರೀತಿ ಶುರುವಾಗಿದೆ. ಈ ನಡುವೆ ಭಾವಿ ಅಳಿಯ ಅತ್ತೆಗೆ ಮೊಬೈಲ್ ಗಿಫ್ಟ್ ಕೂಡ ನೀಡಿದ್ದ. ಆದ್ರೆ ಈ ವಿಚಾರವನ್ನ ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

ಏಪ್ರಿಲ್ 16ರಂದು ಮದುವೆ ನಿಗದಿಯಾಗಿತ್ತು. ಆಮಂತ್ರಣ ಪತ್ರಿಕೆ ಕೂಡ ವಿತರಣೆ ಮಾಡಿಯಾಗಿತ್ತು. ಆದ್ರೆ ಶಾಪಿಂಗ್ ನೆಪದಲ್ಲಿ ಒಟ್ಟಿಗೆ ಹೋಗಿದ್ದ ಅತ್ತೆ ಮತ್ತು ವರ ಅಲ್ಲಿಂದಲೇ ಪರಾರಿಯಾಗಿದ್ದಾರೆ. ಅವರು ಎಲ್ಲಿದ್ದಾರೆ ಎನ್ನುವುದು ಯಾರಿಗೂ ತಿಳಿದಿಲ್ಲ. ಅನುಮಾನ ಬಂದು ಮನೆಯನ್ನು ಪರಿಶೀಲನೆ ಮಾಡಿದ ವೇಳೆ ಮದುವೆ ಆಭರಣಗಳು, ನಗದು ನಾಪತ್ತೆಯಾಗಿತ್ತು. ಇದೀಗ ನೊಂದ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಶೋಧ ನಡೆಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version