ಎಂ.ಪಿ.ಕುಮಾರಸ್ವಾಮಿಗೆ ಬಿಜೆಪಿ ಟಿಕೆಟ್ ಇಲ್ಲ: ಹೈಕಮಾಂಡ್ ಗೆ ಕ್ಲಾಸ್ ತೆಗೆದ ಮೂಡಿಗೆರೆ ಶಾಸಕ

m p kumaraswamy
13/04/2023

ಮೂಡಿಗೆರೆ: ಕೊನೆಗೂ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ್ದು, ಪಕ್ಷದ ಹೈಕಮಾಂಡ್ ನಿರ್ಧಾರದ ಬಗ್ಗೆ ಕುಮಾರಸ್ವಾಮಿ ಬಹಿರಂಗವಾಗಿ ಆಕ್ರೋಶ ಹೊರ ಹಾಕಿದ್ದಾರೆ.

ಅಭಿವೃದ್ಧಿಯಲ್ಲಿ ರಾಜಿಯಾಗದೆ, ಜಾತಿ-ಧರ್ಮವನ್ನ ಸಮಾನಾಗಿ ಕಂಡಿದ್ದು ಹೈಕಮಾಂಡ್ ಗೆ ತಪ್ಪು, ಸರ್ವೇ ಆಧರಿಸಿ ಟಿಕೆಟ್ ನೀಡುವ ಪಕ್ಷದಲ್ಲಿ ಟಿಕೆಟ್ ನೀಡದಿರುವುದು ನೋವು ತಂದಿದೆ ಎಂದು ಕುಮಾರಸ್ವಾಮಿ ಬಿಜೆಪಿ ಹೈಕಮಾಂಡ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ರೈತರಿಗಾಗಿ ವಿಧಾನಸೌಧದ ಮುಂದೆ ಧರಣಿ ಮಾಡಿದ್ದು ಹೈಕಮಾಂಡ್ ಗೆ ತಪ್ಪು ಅನ್ನಿಸಿದ್ದು ಪರಮಾಶ್ಚರ್ಯ, ನಾನು‌ ಶತ್ರುಗಳಗೂ ಕೇಡು ಬಯಸದ ರಾಜಕಾರಣಿ,‌ ಎಲ್ಲರನ್ನೂ ಪ್ರೀತಿಯಿಂದ ಕಂಡೆ, ನಾನು ಬೆಳೆಸಿದ್ದು ಪಕ್ಷದ ಕಾರ್ಯಕರ್ತರನ್ನ ಮನೆಯವರನ್ನಲ್ಲ, ಯೋಚಿಸುವ ಶಕ್ತಿ ನಿಮ್ಮಲ್ಲಿದೆ, ನೀವೇ ನನಗೆ ಶಕ್ತಿ ತುಂಬುವ ಕೈಗಳು, ಮುಂದೆಯೂ ನಿಮ್ಮ ಜೊತೆಯೇ ಇರ್ತೇನೆ ಎಂದು ಅವರು ಹೇಳಿದರು.

ಪಕ್ಷಾಂತರ ಅಥವ ಪಕ್ಷೇತರವಾಗಿ ಸ್ಪರ್ಧಿಸುವ ಸುಳಿವನ್ನು ಕುಮಾರಸ್ವಾಮಿ ನೀಡಿದ್ದು, ಬಿಜೆಪಿ ಹೈಕಮಾಂಡ್ ನಿರ್ಧಾರ ಇದೀಗ ಕುಮಾರಸ್ವಾಮಿ ವಿರೋಧಿ ಬಣಕ್ಕೆ ಖುಷಿ ತಂದಿದ್ದರೂ ಮತ್ತೊಂದೆಡೆ ಬಿಜೆಪಿ ಪಕ್ಷಕ್ಕೆ ದೊಡ್ಡ ನಷ್ಟವನ್ನು ಉಂಟು ಮಾಡುವ ಸಾಧ್ಯತೆಗಳು ಕಂಡು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version