7:24 PM Friday 11 - September 2026

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹದ ಮೇಲೆ ರಾತ್ರಿಯಿಡೀ ಸಂಚರಿಸಿದ ವಾಹನಗಳು!

bangalore
29/11/2021

ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹದ ಮೇಲೆಯೇ ವಾಹನಗಳು ಸಂಚರಿಸಿದ ಅಮಾನವೀಯ ಘಟನೆಯೊಂದು ಬೆಂಗಳೂರು—ತುಮಕೂರು ರಾಷ್ಟ್ರೀಯ ಹೆದ್ದಾರಿ 4ರ ರಾಯರಪಾಳ್ಯದ ಬಳಿಯಲ್ಲಿ ನಡೆದಿದೆ.

ವರದಿಗಳ ಪ್ರಕಾರ, ಶನಿವಾರ ರಾತ್ರಿ ವೇಳೆ ನಡೆದ ಅಪಘಾತದಲ್ಲಿ ರಸ್ತೆಯಲ್ಲಿಯೇ ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿದ್ದು, ಇತರ ವಾಹನಗಳು ವ್ಯಕ್ತಿಯ ಮೃತದೇಹದ ಮೇಲೆಯೇ ಸಂಚರಿಸಿದ್ದು, ಇಡೀ ರಾತ್ರಿ ವಾಹನಗಳು ಸಂಚರಿಸಿದ್ದರಿಂದಾಗಿ ವ್ಯಕ್ತಿಯ ಮೃತದೇಹ ಛಿದ್ರಛಿದ್ರಗೊಂಡು ರಸ್ತೆ ಪೂರ್ತಿ ಹರಡಿದೆ.

ಇದೀಗ ವ್ಯಕ್ತಿಯ ಛಿದ್ರಗೊಂಡ ಮಾಂಸದ ತುಂಡುಗಳನ್ನು ಸಂಗ್ರಹಿಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದೇಹ ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ಸ್ಥಿತಿಯಲ್ಲಿರುವ ಕಾರಣ, ಮೃತಪಟ್ಟ ವ್ಯಕ್ತಿ ಯಾರು ಎನ್ನುವುದು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆಟೋಗೆ ಡಿಕ್ಕಿ ಹೊಡೆದ ಲಾರಿ: ಬಾಲಕನ ದಾರುಣ ಸಾವು, ಮೂವರ ಸ್ಥಿತಿ ಗಂಭೀರ

ಲಾಕಪ್ ಡೆತ್: ಪೊಲೀಸರ ವಶದಲ್ಲಿದ್ದ ವ್ಯಕ್ತಿಯ ಅನುಮಾನಾಸ್ಪದ ಸಾವು!

ಹೃದಯಾಘಾತವಾದ ರೋಗಿಗೆ ಚಿಕಿತ್ಸೆ ನೀಡುತ್ತಿರುವಾಗ ವೈದ್ಯರಿಗೂ ಹೃದಯಾಘಾತ!

ಒಮಿಕ್ರಾನ್: ಸಾವಿನ ಮೆರವಣಿಗೆ ಮತ್ತೆ ಬೇಡ, ಯಾರೂ ಎಚ್ಚರ ತಪ್ಪುವುದು ಬೇಡ | ಹೆಚ್.ಡಿ.ಕುಮಾರಸ್ವಾಮಿ

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇದೆಯಾ? | ಸಚಿವ ಸುಧಾಕರ್ ನೀಡಿದ ಖಡಕ್ ಎಚ್ಚರಿಕೆ ಏನು?

ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ: ಸರ್ಕಾರವನ್ನು ತರಾಟೆಗೆತ್ತಿಕೊಳ್ಳಲು ವಿಪಕ್ಷಗಳು ಸಜ್ಜು

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇದೆಯಾ? | ಸಚಿವ ಸುಧಾಕರ್ ನೀಡಿದ ಖಡಕ್ ಎಚ್ಚರಿಕೆ ಏನು?

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler
Exit mobile version