ಪಂಜಾಬ್ ಸಿಎಂ, ಕ್ಯಾಪ್ಟನ್ ಅಮರಿಂದರ್ ಸಿಂಗ್ ನಡುವೆ ರಾಜಕೀಯ ಕೆಸರೆರಚಾಟ: ವಾಗ್ಯುದ್ದಕ್ಕೆ ಕಾರಣವಾದ ಕುಖ್ಯಾತ ಕ್ರಿಮಿನಲ್ ವಿಚಾರ..!

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಬಿಜೆಪಿ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ನಡುವೆ ವಾಕ್ಸಮರ ಭುಗಿಲೆದ್ದಿದೆ. ಕುಖ್ಯಾತ ಕ್ರಿಮಿನಲ್ ಮುಖ್ತಾರ್ ಅನ್ಸಾರಿ ರಾಜ್ಯದ ಜೈಲುಗಳಲ್ಲಿ ಅದ್ದೂರಿಯಾಗಿ ತಂಗಿದ್ದಕ್ಕಾಗಿ ಖರ್ಚು ಮಾಡಿದ 55 ಲಕ್ಷ ರೂಪಾಯಿಯನ್ನು ಸರ್ಕಾರ ಪಾವತಿಸುವುದಿಲ್ಲ ಎಂದು ಮಾಜಿ ಸಿಎಂ ಸಿಂಗ್ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಪಂಜಾಬ್ ಸಿಎಂ, ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಮಾಜಿ ಉಪ ಮುಖ್ಯಸ್ಥ ಸುಖ್ಜಿಂದರ್ ರಾಂಧವ ಅವರಿಂದ ಹಣವನ್ನು ವಶಪಡಿಸಿಕೊಳ್ಳಲಾಗುವುದು ಎಂದಿದ್ದರು.
ಒಂದು ವೇಳೆ ಅವರು ಹಣವನ್ನು ಪಾವತಿಸಲು ವಿಫಲವಾದರೆ ಹಣವನ್ನು ಮರುಪಡೆಯಲು ಅವರ ಪಿಂಚಣಿ ಮತ್ತು ಇತರ ಪ್ರಯೋಜನಗಳನ್ನು ನಿಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಮಾನ್ ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಕ್ಯಾಪ್ಟನ್ ಅಮರಿಂದರ್ ಸಿಂಗ್, ಇಂತಹ ಹೇಳಿಕೆಗಳನ್ನು ನೀಡುವ ಮೊದಲು ಕಾನೂನು ಮತ್ತು ತನಿಖೆಯ ಪ್ರಕ್ರಿಯೆಯನ್ನು ಕಲಿಯಿರಿ ಎಂದು ಸವಾಲೆಸೆದಿದ್ದಾರೆ. ಇದು ಅವರ ಆಡಳಿತದ ಬಗ್ಗೆ ಅವರ ಅಜ್ಞಾನವನ್ನು ಬಹಿರಂಗಪಡಿಸುತ್ತದೆ. ಕ್ಯಾಪ್ಟನ್ ಅಮರಿಂದರ್ ಅವರು ಒಂಬತ್ತೂವರೆ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಾನ್ ಒಂದೂವರೆ ವರ್ಷವನ್ನು ಸಹ ಪೂರ್ಣಗೊಳಿಸಿಲ್ಲ ಎಂದು ವ್ಯಂಗ್ಯವಾಡಿದರು.
ಆಡಳಿತದ ಪ್ರಕ್ರಿಯೆಗಳ ಬಗ್ಗೆ ಇಂತಹ ಅಜ್ಞಾನದ ಹೇಳಿಕೆಗಳನ್ನು ನೀಡುವ ಮೊದಲು ಅವರು ಮೊದಲು ಕಾನೂನಿನ ಬಗ್ಗೆ ಕಲಿಯಬೇಕು, ಅನುಭವವನ್ನು ಪಡೆಯಬೇಕು ಎಂದು ಸಿಂಗ್ ಹೇಳಿದ್ದಾರೆ.
ಅನ್ಸಾರಿಯನ್ನು ಪಂಜಾಬ್ ಗೆ ಕರೆತರಲಾಯಿತು. ತನಿಖೆಗಾಗಿ ಕರೆದುಕೊಂಡು ಬಂದು ಇಲ್ಲಿ ಬಂಧಿಸಲಾಯಿತು ಎಂದು ಅವರು ಆರೋಪಿಸಿದ್ದಾರೆ. ಇಂತಹ ತಮಾಷೆಯ ಹೇಳಿಕೆಗಳನ್ನು ನೀಡುವ ಮೊದಲು ಕಾನೂನು ಮತ್ತು ತನಿಖಾ ಪ್ರಕ್ರಿಯೆಗಳ ಬಗ್ಗೆ ತಮ್ಮ ಜ್ಞಾನವನ್ನು ತೋರಿಸುವಂತೆ ಸಲಹೆ ನೀಡಿದರು.
ಪಟಿಯಾಲಾ ವಂಶಸ್ಥರ ಸ್ವಯಂ ಘೋಷಿತ ‘ಬುದ್ಧಿವಂತಿಕೆ’ ರಾಜ್ಯವನ್ನು ಹಾಳುಮಾಡಿದೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದರು. ಕ್ಯಾಪ್ಟನ್ ಅಮರಿಂದರ್ ಸಿಂಗ್ ಯಾವಾಗಲೂ ರಾಜ್ಯ ಮತ್ತು ಅದರ ಜನರಿಗಿಂತ ಹೆಚ್ಚಾಗಿ ತಮ್ಮ ಕುರ್ಚಿಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದರು ಎಂದು ಇಡೀ ಪಂಜಾಬ್ ಗೆ ತಿಳಿದಿದೆ ಎಂದು ಮಾನ್ ವ್ಯಂಗ್ಯವಾಡಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw