6:15 AM Saturday 20 - December 2025

ಚುನಾವಣೆ ಗೆಲ್ಲಲು ಮುನಿರತ್ನ ಹನಿಟ್ರ್ಯಾಪ್‌: ವೇಲು ಆರೋಪ

munirathna
25/07/2023

ಹನಿಟ್ರ್ಯಾಪ್ ಮಾಡುವುದು ಹೆದರಿಸುವುದು ಮುನಿರತ್ನ ಅವರ ಕಾಯಕವಾಗಿದೆ. ಜೆ.ಪಿ.ಪಾರ್ಕ್‌, ಡಾಲರ್ಸ್‌ ಕಾಲೋನಿಯಲ್ಲಿ ಇದಕ್ಕಾಗಿಯೇ ಒಂದು ಸ್ಟುಡಿಯೋ ಇದೆ ಎಂದು ಮುನಿರತ್ನ ಬೆಂಬಲಿಗರಾಗಿದ್ದ ‌ಮಾಜಿ ಕಾರ್ಪೋರೇಟರ್ ವೇಲು ಆರೋಪಿಸಿದ್ದಾರೆ.

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬಳಿಕ‌‌ ಮಾತನಾಡಿದ ವೇಲು, ನಾವು ಮುನಿರತ್ನ ಅವರಿಗೆ ಚುನಾವಣೆ ಎದುರಿಸುವುದು ಹೇಗೆ ಎಂದು ಕೇಳಿದ್ದೆವು. ಅದಕ್ಕೆ ಮುನಿರತ್ನ, ನಿಮ್ಮಗಳದ್ದು ಈಸ್ಟ್‌ಮನ್ ಕಲರ್ ಪಿಚ್ಚರ್ ಇದೆ ತೋರಿಸ್ಲಾ ಇಲ್ಲ ಕೆಲಸ ಮಾಡ್ತೀರಾ ಎಂದು ಹೆದರಿಸುತ್ತಿದ್ದರು. ಹನಿಟ್ರ್ಯಾಪ್ ಮಾಡುವುದಕ್ಕೆಂದೇ ಮುನಿರತ್ನ ಸ್ಟುಡಿಯೋ ಇಟ್ಟುಕೊಂಡಿದ್ದಾರೆ. ಕರೆಸುವುದು, ಹನಿಟ್ರ್ಯಾಪ್ ಮಾಡುವುದು, ಅದನ್ನು ಇಟ್ಟುಕೊಂಡು ಹೆದರಿಸುವುದು ಮಾಡುತ್ತಾರೆ.ಮುನಿರತ್ನ ನಿರ್ಮಾಪಕನಾಗಿ ಮಾಡಿದ ಮೊದಲ ಚಿತ್ರ ಆಂಟಿ ಪ್ರೀತ್ಸೆ. ಹೀಗಾಗಿ ಮುನಿರತ್ನ ಸಚಿವರಾದ ಮೇಲೂ ಬರೀ ಆಂಟಿಗಳೇ ಇರುತ್ತಿದ್ದರು. ವಿಕಾಸಸೌಧ, ವಿಧಾನಸೌಧ ಚೇಂಬರ್‌ನಲ್ಲೆಲ್ಲಾ ಬರೀ ಆಂಟಿಗಳೇ ಇರುತ್ತಿದ್ದರು

ಎಂದು ವೇಲು ಆರೋಪಿಸಿದರು.  ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ ಸುರೇಶ್, ಆರ್.ಆರ್ ನಗರದ ಪಕ್ಷದ ಅಭ್ಯರ್ಥಿ ಕುಸುಮಾ ಹನುಮಂತ ರಾಯಪ್ಪ ಹಾಜರಿದ್ದರು.

ಹನಿಟ್ರ್ಯಾಪ್‌ ಆರೋಪಕ್ಕೆ ಮುನಿರತ್ನ ತಿರುಗೇಟು:

ವೇಲು ಮಾಡಿರುವ ಹನಿಟ್ರ್ಯಾಪ್ ಆರೋಪವನ್ನು ತಳ್ಳಿಹಾಕಿರುವ ಮಾಜಿ ಸಚಿವ ಮುನಿರತ್ನ ತಿರುಗೇಟು ನೀಡಿದ್ದಾರೆ.

ನನ್ನ ವಿರುದ್ಧ ವೇಲು ನಾಯ್ಕರ್ ಆರೋಪ ಮಾಡಿಲ್ಲ. ಡಿ.ಕೆ ಸುರೇಶ್ ಮತ್ತು ಡಿ.ಕೆ ಶಿವಕುಮಾರ್ ಆರೋಪ ಮಾಡಿಸಿದ್ದಾರೆ. ವೇಲ್ ನಾಯ್ಕರ್ ನಮ್ಮವನು ಎಂದಿದ್ದಾರೆ.

ವೇಲು ನನ್ನ ಬಳಿ ಇದ್ದಾಗ ಡಿ.ಕೆ ಶಿವಕುಮಾರ್ ಬಗ್ಗೆ ಹೇಳಿದ್ದ. ಡಿ.ಕೆ ಶಿವಕುಮಾರ್ ಅವರು ರಮೇಶ್ ಜಾರಕಿಹೊಳಿ ಅವರನ್ನು ಹನಿಟ್ರ್ಯಾಪ್‌ ಮಾಡಿಸಿ ಹಾಳು ಮಾಡಿಬಿಟ್ಟು ಸರ್ ಎಂದಿದ್ದ. ಜೊತೆಗೆ ಸಂಸದ ಡಿ.ಕೆ.ಸುರೇಶ್ ಮತ್ತು ಡಿ.ಕೆ.ರವಿ ಪತ್ನಿ ಕುಸುಮಾ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದನು ನಾನೇ ಆಗ ಇದೆಲ್ಲ ನನ್ನ ಬಳಿ ಹೇಳಬೇಡ ಬೈದು ಕಳಿಸಿದ್ದೆ ಅವರ ಬಗ್ಗೆ ಜನರಿಗೆ  ನಂಬಿಕೆ ಬರಬೇಕಾದ್ರೆ ಇಂತಹದ್ದೇನಾದರೂ ಮಾಡಬೇಕಲ್ಲ. ಅದಕ್ಕೆ ದಾಖಲೆಯಾಗಿ ಈ ಆರೋಪ ಮಾಡಿದ್ದಾರೆ ಅಷ್ಟೇ ಇದೆಲ್ಲವೂ ಶುದ್ಧ ಸುಳ್ಳು ಎಂದು ಆರೋಪಗಳನ್ನ ತಳ್ಳಿಹಾಕಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿhttps://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿhttps://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿhttps://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version